News Kannada
Friday, September 30 2022

ಮೈಸೂರು

ಬಾಲಭವನದ ರೈಲಲ್ಲಿ ಸುತ್ತೋಣ ಬಾರಾ.. - 1 min read

Photo Credit :

ಬಾಲಭವನದ ರೈಲಲ್ಲಿ ಸುತ್ತೋಣ ಬಾರಾ..

ಮೈಸೂರು: ನಾವೆಲ್ಲರೂ ಪ್ಯಾಸೆಂಜರ್ ನಿಂದ ಮೆಟ್ರೋ ತನಕ ವಿವಿಧ ರೀತಿಯ ರೈಲುಗಳಲ್ಲಿ ಓಡಾಡಿರಬಹುದು. ಆದರೆ ಮಕ್ಕಳ ಜೊತೆ ಕುಳಿತು ಮಕ್ಕಳಾಗಿ ಪುಟಾಣಿ ರೈಲಿನಲ್ಲಿ ಸುತ್ತಿ ಬರುವ ಮಜಾವೇ ಬೇರೆ.

ಇಂತಹ ಮಜಾವನ್ನು ಮೈಸೂರು ದಸರಾಕ್ಕೆ ಬಂದವರು ವಸ್ತುಪ್ರದರ್ಶನದಲ್ಲಿರುವ ಪುಟಾಣಿ ರೈಲುಗಳಲ್ಲಿ ಪಡೆಯುತ್ತಾರೆ. ಅದು ಕೇವಲ ಒಂದೋ ಎರಡೋ ತಿಂಗಳ ಕಾಲ ಮಾತ್ರ ಇರುತ್ತದೆ. ಆದರೆ ಸುಂದರ ಪರಿಸರದಲ್ಲಿ ಸ್ವಚ್ಛಂದವಾಗಿ ಚುಕುಬುಕು ಎನ್ನುತ್ತಾ ಸಾಗಬೇಕಾದರೆ ನಗರದ ಬನ್ನಿಮಂಟಪ ಬಳಿಯಿರುವ ಬಾಲಭವನದತ್ತ ಹೆಜ್ಜೆ ಹಾಕಲೇ ಬೇಕಾಗುತ್ತದೆ. ಒಂದು ವೇಳೆ ಬಾಲಭವನಕ್ಕೆ ತೆರಳಿದ್ದೇ ಆದರೆ ನಮ್ಮ ಮುಂದೆ ಪುಟಾಣಿಗಳ  ಲೋಕವೊಂದು ತೆರೆದುಕೊಳ್ಳುತ್ತದೆ. ಬಾಲಭವನ ಮತ್ತು ಇಲ್ಲಿನ ಪುಟಾಣಿ ರೈಲು ನೋಡುವಾಗ ನಮಗೆ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನೆನಪಾಗುತ್ತಾರೆ. ಇವತ್ತು ಬಾಲಭವನ ಇದೆ ಎಂದರೆ ಅದು ಅರಸು ಅವರ ದೂರದೃಷ್ಠಿ ಎಂದರೆ ತಪ್ಪಾಗಲಾರದು.

1979ರಲ್ಲಿ ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವಿವಿಧ ಆಟಗಳು ಹಾಗೂ ಕಲೆಗಳ ತರಬೇತಿಗೆಂದೇ ಅವರು ಬನ್ನಿಮಂಟಪದ ಬಳಿ ಬಾಲಭವನವನ್ನು ಸ್ಥಾಪಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರು 10 ಎಕರೆ  ಜಾಗದಲ್ಲಿ  ಬಾಲಭವನ  ನಿರ್ಮಿಸಲಾಯಿತಲ್ಲದೆ, ಮಕ್ಕಳ ಅನುಕೂಲಕ್ಕಾಗಿ ಪುಟಾಣಿ ರೈಲೊಂದನ್ನು ತರುವ ಪ್ರಯತ್ನವೂ ನಡೆಯಿತು. ಈ ರೈಲನ್ನು ಸ್ವತಃ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರೇ ಉದ್ಘಾಟಿಸಿದರು ಎನ್ನುವುದು ಮತ್ತೊಂದು ವಿಶೇಷ. ಇದೀಗ ಈ ರೈಲು ಬಾಲ ಭವನದ ಪ್ರಮುಖ ಆಕರ್ಷಣೆಯಾಗಿ ಗಮನಸೆಳೆಯುತ್ತದೆ. ಇದಕ್ಕೆ ಜವಾಹರ ಚಾಮುಂಡಿ ಬಾಲಭವನ ಎಕ್ಸ್ಪ್ರೆಸ್  ಎಂಬ ಹೆಸರನ್ನಿಡಲಾಗಿದೆ. ಸುಮಾರು 100 ಜನ  ಈ ರೈಲಲ್ಲಿ ಪ್ರಯಾಣಿಸಬಹುದಾಗಿದೆ.

ರೈಲು ಹತ್ತಿ ಕೇಕೆ ಹಾಕುತ್ತಾ ಖುಷಿ ಪಡುತ್ತಾ ಮಕ್ಕಳು ಅದರಲ್ಲಿ ತೆರಳುವುದನ್ನು ನೋಡುವುದೇ ಒಂದು ರೀತಿಯ ಮಜಾ ಕೊಡುತ್ತದೆ. ಮಾಮೂಲಿ ಪ್ಯಾಸೆಂಜರ್ ರೈಲ್ ನಿಂದ ಪ್ರಾರಂಭವಾಗಿ ಮೆಟ್ರೋ ತನಕ ಪ್ರಯಾಣಿಸಿ ಬಂದವರೂ ಇದರಲ್ಲೊಮ್ಮೆ ಕುಳಿತು ಸುತ್ತು ಹೊಡೆಯೋಣ ಎಂದು ಇಷ್ಟಪಡುತ್ತಾರೆ. ಮಕ್ಕಳಿಗಂತು ಇದರಲ್ಲೊಮ್ಮೆ ಕುಳಿತು ಕೊಳ್ಳಲೇ ಬೇಕು ಎಂಬ ಬಯಕೆ ಚಿಗುರುತ್ತದೆ. ಚುಕುಬುಕು ಸದ್ದು ಮಾಡುತ್ತಾ ಸಾಗುವ ರೈಲಿನಲ್ಲಿ ಶಿಳ್ಳೆ ಮತ್ತು ಕೇಕೆ ಹಾಕುತ್ತಾ ಮಕ್ಕಳು ಸಂಭ್ರಮಿಸುತ್ತಾರೆ. ಇನ್ನು ಪುಟ್ಟ ಕಂಬಿಗಳ ಮೇಲೆ ಸೇತುವೆ, ಲೆವಲ್ ಕ್ರಾಸಿಂಗ್, ಸಿಗ್ನಲ್ ಎಲ್ಲವನ್ನೂ ದಾಟಿ, ಹಸಿರು ವನರಾಶಿಯ ಮಧ್ಯೆ ರೈಲು ಸಂಚರಿಸುವಾಗ  ಮಕ್ಕಳು ಮೈ ಮರೆಯುತ್ತಾರೆ. ಓಹೋ… ಕೂ.. ಎನ್ನುತ್ತಾ…ಚಪ್ಪಾಳೆ ತಟ್ಟಿ ಸಂತಸ ಪಡುತ್ತಾರೆ. ಇದನ್ನು ನೋಡುತ್ತಿದ್ದರೆ ದೊಡ್ಡವರಿಗೂ ಬಾಲ್ಯ ನೆನಪಾಗುತ್ತದೆ.

ಪುಟಾಣಿ ರೈಲನ್ನು ಚಾಲಿಸಲು ಚಾಲಕ ಹಾಗೂ ಸಹಾಯಕ ಚಾಲಕರಿದ್ದಾರೆ. ಅವರು ಮಕ್ಕಳನ್ನು ಕ್ಷೇಮವಾಗಿ ಸುತ್ತಿಸಿ ತಂದು ಬಿಡುತ್ತಾರೆ. ಹೀಗಾಗಿ ಯಾವುದೇ ಭಯವಿಲ್ಲ.

See also  ಬಹರೈನ್ ನ ಹನ್ನೊಂದು ಜನರ ತಂಡ ಮೈಸೂರಿಗೆ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು