News Kannada
Saturday, October 01 2022

ಮೈಸೂರು

ದಸರಾಗೆ ತೆರೆ … ಮೈರೋಮಾಂಚನಗೊಳಿಸಿದ ಮಲ್ಲಕಂಬ ಪ್ರದರ್ಶನ - 1 min read

Photo Credit :

ದಸರಾಗೆ ತೆರೆ ... ಮೈರೋಮಾಂಚನಗೊಳಿಸಿದ ಮಲ್ಲಕಂಬ ಪ್ರದರ್ಶನ

ಮೈಸೂರು: ಬನ್ನಿಮಂಟಪದ ರೋಚಕ ಕಸರತ್ತುಗಳ ಪಂಜಿನ ಕವಾಯತಿನೊಂದಿಗೆ 11 ದಿನಗಳ ನಾಡಹಬ್ಬ ದಸರಾ ಇಂದು ಮುಕ್ತಯವಾಯಗಿದ್ದು ಬಾಗಲಕೋಟೆಯ ಸರ್ಕಾರಿ ಶಾಲಾ ಮಕ್ಕಳು ನಡೆಸಿಕೊಟ್ಟ ಮಲ್ಲಕಂಬ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡುವುದರೊಂದಿಗೆ ದಸರಾಗೆ ತೆರೆ.

ಜಂಬೂಸವಾರಿ ಮುಗಿದ ನಂತರ ರಾತ್ರಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ರಾಜ್ಯಪಾಲ ವಜೂಭಾಯಿರೂಡವಾಲಾ ಗೌರವ ವಂದನೆ ಸ್ವೀಕರಿಸಿದ ನಂತರ ಆರಂಭವಾದ ಕಾರ್ಯಕ್ರಮದಲ್ಲಿ ಬೈಕ್ ಸಾಹಸ, ಮಲ್ಲಕಂಬ ಪ್ರದರ್ಶನ, ಡೊಳ್ಳುಕುಣಿತ, ಸವಾರಿಗಳ ರೋಚಕ ಕಸರತ್ತುಗಳು ಮೂರು ಗಂಟೆಗಳ ಕಾಲ ನೆರದಿದ್ದ ಜನರಲ್ಲಿ ರೋಮಾಂಚನ ಉಂಟುಮಾಡಿತ್ತು.

ಗಮನ ಸೆಳೆದ ಮಲ್ಲಕಂಬ ಪ್ರದರ್ಶನ:

ಮೊದಲ ಬಾರಿಗೆ ದಸರಾದ ಪಂಜಿನ ಕವಾಯತಿನಲ್ಲಿ ಮಲ್ಲಗಂಬ ಪ್ರದರ್ಶನ ಏರ್ಪಡಿಸಿದ್ದು ಬಾಗಲಕೋಟೆ ಜಿಲ್ಲೆಯ ತುಳಸಿಗಿರಿ ಸರ್ಕಾರಿ ಶಾಲೆ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲಗಂಬ ಪ್ರದರ್ಶನ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಮಲ್ಲಗಂಬದ ಮೇಲೆ ಓಂಕಾರಾಸನ, ಬಾಳೆಗೊನೆ ಆಕಾರದ ಗೋಪುರ, ನವಾಸನ ಗೋಪುರ, ಪದ್ಮಸಾನ, ಭಜರಂಗ, ಪರ್ವತಾಸನ ಮೊದಲಾದವುಗಳನ್ನು ಪ್ರದರ್ಶಿಸಿದರು. ಇನ್ನೂ ವಿದ್ಯಾರ್ಥಿನಿಯರು ಹಗ್ಗದ ಮೇಲೆ ನಿದ್ರಾಸನ, ಶವಾಸನ ಕ್ರಿಸ್ತಾಸನ, ಚಕೋರಾಸನ, ಕಂದಕಾಸನ, ರಾಷ್ಟ್ರೀಯ ಪುಷ್ಪಗೋಪುರ ಪ್ರದರ್ಶಿಸಿ ನೋಡುಗರನ್ನ ಮೋಡಿ ಮಾಡಿದರು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಿಣೆಯಾದ ಪಂಜಿನ ಕವಾಯತಿನಲ್ಲಿ ಹಾಸನದ ಪೊಲೀಸ್ ತರಬೇತಿ ಶಾಲೆ ಪ್ರಶಿಕ್ಷರ್ಣಾಥಿಗಳು ನಡೆಸಿಕೊಟ್ಟ ಪಂಜಿನ ಕವಾಯಿತು ಮನಮೋಹಕವಾಗಿತ್ತು.

ಇದಲ್ಲದೆ ಕಾರ್ಯಕ್ರಮದ ಆರಂಭದಲ್ಲಿ ಅಶ್ವರೋಹಿ ಧಳ, ಅಂಗ ರಕ್ಷಕ ಪಡೆ, ಸಶಸ್ರ್ತ ಪಡೆ, ರಾಜ್ಯ ಪೊಲೀಸ್ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ರೈಲ್ವೆ ರಕ್ಷಣಾ ಧಳ, ಮಹಿಳಾ ಪೊಲೀಸ್ ಅಕಾಡಮಿ ತಂಡ ಎನ್ ಸಿಸಿ ಸೇರಿದಂತೆ ಹಲವಾರು ತಂಡಗಳು ಪಂಚಿನಕವಾಯತಿನಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದರು.

 

 

See also  ದೇಶವಿರೋಧಿ ವಿಡಿಯೋ: ತ್ರಿಪುರ ಯುವಕ ಮೈಸೂರಲ್ಲಿ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು