News Kannada
Sunday, October 02 2022

ಮೈಸೂರು

ಸರಾಗವಾಗಿ ಸಾಗಿದ ಜಂಬೂ ಸವಾರಿ…ತಂಪನ್ನೆರದ ವರುಣಾ - 1 min read

Photo Credit :

ಸರಾಗವಾಗಿ ಸಾಗಿದ ಜಂಬೂ ಸವಾರಿ...ತಂಪನ್ನೆರದ ವರುಣಾ

ಮೈಸೂರು: ಕಾವೇರಿ ಕಾರ್ಮೋಡ ಕರಗಿ ತಂಪಾದ ವರುಣಾನ ಸಿಂಚನದ ನಡುವೆ ಈ ಬಾರಿ ದಸರಾ ಹಲವಾರು ಅಡೆ ತಡೆಗಳನ್ನು ದಾಟಿ ಯಶಸ್ವಿಯಾಗಿ ಜಂಬೂಸವಾರಿ ನೆರವೇರಿದ್ದು ಮುಂಬರುವ ವರ್ಷ ನಾಡು ಸುಬೀಕ್ಷೆವಾಗಿಲಿದೆ ಎಂಬ ಭವಿಷ್ಯ ನುಡಿದು ಮುಕ್ತಯವಾಗಿದೆ.

ಒಂದು ಕಡೆ ನಾಡಿನಲ್ಲಿ ಭೀಕರ ಬರಗಾಲ ಮತ್ತೊಂದೆಡೆ ಕಾವೇರಿ ಗಲಾಟೆಯಿಂದ ದಸರಾ ನಡೆಯುವುದೇ ಅನುಮಾನ ಎಂಬ ವಾತಾವರಣ ನಿರ್ಮಾಣವಾಗಿದ್ದು ನವರಾತ್ರಿ ಆರಂಭವಾದರೂ ದಸರಾ ಪ್ರವಾಸಿಗರಿಲ್ಲದೆ ಕಳೆಗುಂದಿತ್ತು, ಆದರೆ ವಿಜಯದಶಮಿಗೆ ಮೂರು ದಿನ ಬಾಕಿ ಇರುವಾಗಲೇ ಪ್ರವಾಸಿಗರ ದಂಡೇ ಮೈಸೂರಿನ ಕಡೆ ಹರಿದು ಕಾವೇರಿ ವಿವಾದ ತಣ್ಣಗಾಗಿದೆ.

ಮಳೆಯಲ್ಲಿ ಪುಷ್ಪಾರ್ಚಾನೆ:

ಕಳೆದ ಮೂರು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಮಳೆ ಇರಲಿಲ್ಲ ಬದಲಾಗಿ ನಾಡಿನಲ್ಲಿ ಬರದ ಚಾಯೇ ಆವರಿಸಿತ್ತು. ಈ ಬಾರಿ ದಸರಾ ಜಂಬೂ ಸವಾರಿಗೆ ಮೊದಲು ನಂದಿ ಧ್ವಜ ಪೂಜೆಗೆ 2.16 ನಿಮಿಷಕ್ಕೆ ಆರಂಭವಾದ ಮಳೆ ಸತತ ಮೂರು ಗಂಟೆಯ ಕಾಲ ಬಿಟ್ಟು ಬಿಟ್ಟು ಬಂದು ಅರಮನೆಯನ್ನು ತಂಪಾಗಿಸಿದ್ದು ಮೂರು ಗಂಟೆಗಳ ಕಾಲ ಮಳೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಅರಮನೆ ಆವರಣದ ವೇದಿಕೆಯಲ್ಲಿ ಕುಳಿತು ಕಲಾತಂಡಗಳು ಮತ್ತು ಸ್ತಬ್ಧ ಚಿತ್ರಗಳನ್ನು ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಜಂಬೂಸವಾರಿಯ ದಿನ ಮಳೆ ಬಂದರೆ ಆ ವರ್ಷ ರಾಜ್ಯಕ್ಕೆ ಉತ್ತಮ ಮಳೆಯಾಗಿ ರಾಜ್ಯ ಸುಭೀಕ್ಷೆಯಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲ್ಲೆಯಲ್ಲಿ ಜಂಬೂಸವಾರಿಯ ದಿನ ಮಳೆ ಬಂದಿರುವುದರಿಂದ ತುಂಬ ಖುಷಿಯಾಗಿದ್ದರು ಸಿಎಂ ಸಿದ್ದರಾಮಯ್ಯ. ಜೊತೆಗೆ ಮಳೆಯ ನಡುವೆಯೇ ಜಂಬೂಸವಾರಿಗೆ ಪುಷ್ಪಾರ್ಚಾನೆ ನೇರವೇರಿಸಿದರು.

ಗಮನ ಸೆಳೆದ ಸ್ತಬ್ಧ ಚಿತ್ರ ಮತ್ತು ಕಲಾ ತಂಡ:

ಈ ಬಾರಿ ಜಂಬೂ ಸವಾರಿಯಲ್ಲಿ 30 ಜಿಲ್ಲೆಯ ವಿವಿಧ ಪ್ರಕಾರದ ಸ್ತಬ್ಧ ಚಿತ್ರಗಳು ನಾಲ್ಕು ವಿವಿದ ಬ್ಯಾಂಕ್ ಗಳು, 8 ವಿವಿಧ ಇಲಾಖೆಯ ಸಾಧನೆ ಸಾರುವ ಸ್ತಬ್ಧ ಚಿತ್ರಗಳು ಸೇರಿದಂತೆ 42 ಸ್ತಬ್ಧ ಚಿತ್ರಗಳು, 35 ಕಲಾ ತಂಡಗಳು ಭಾಗವಹಿಸಿದ್ದು ಸುಮಾರು ಎರಡೂವರೆ ಗಂಟೆಗಳ ಕಾಲ ಅರಮನೆಯಿಂದ ಬನ್ನಿ ಮಂಟಪದವರೆಗೆ ಲಕ್ಷಾಂತರ ಜನರ ನಡುವೆ ಸಾಗಿದವು.

ಬಿಗಿ ಬಂದೂಬಸ್ತ್:

ಈ ಬಾರಿ ಹಿಂದಿನಿಂಗಿತಲೂ ಜಂಬೂಸವಾರಿಗೆ ಹೆಚ್ಚಿನ ಪೊಲೀಸ್ ಬಂದೂಬಸ್ತ್ ಏರ್ಪಡಿಸಿದ್ದು ಜಂಬೂಸವಾರಿಯ ಆನೆಗೆ 80 ಕಾಮೊಂಡೋ ಪಡೆಯ ಭದ್ರತೆ ನೀಡಲಾಗಿದ್ದು ಅರಮನೆಯೊಳಗೆ 1500 ಸಾವಿರ ಪೊಲೀಸ್ ಬಂದೂಬಸ್ತ್ ಏರ್ಪಡಿಸಿದ್ದು 4000ಕ್ಕೂ ಹಿಚ್ಚಿನ ಪೊಲೀಸರನ್ನು ಜಂಬೂಸವಾರಿ ಸಾಗುವ ಬನ್ನಿ ಮಂಟಪದ ವರೆಗಿನ ರಸ್ತೆಯಲ್ಲಿ ನಿಯೋಜನೆ ಮಾಡಲಾಗಿತ್ತು.

ದಾಖಲೆ ನಿರ್ಮಿಸಿದ ಸಿಎಂ:

ಇಲ್ಲಿಯವರೆಗೆ ಸತತವಾಗಿ ನಾಲ್ಕು ವರ್ಷಗಳ ಕಾಲ ನಾಡ ಅದಿದೇವತೆ ಚಾಮುಂಡಿತಾಯಿಗೆ ಜಂಬೂಸವಾರಿಯ ದಿನ ಪುಷ್ಪಾರ್ಚನೆ ಮಾಡಿದ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದು ಅಲ್ಲದೆ ಧರಂಸಿಂಗ್, ಕುಮಾರಸ್ವಾಮಿ, ಸದಾನಂದಗೌಡ, ಜಗದೀಶ್ ಶೆಟ್ಟರ್ ಒಂದು ಬಾರಿ ದಸರಾ ಜಂಬೂಸವಾರಿಗೆ ಮಾಡಿದರೆ ಬಿಎಸ್ ವೈ ಮೂರು ಬಾರಿ ಪುಷ್ಪಾರ್ಚನೆ ಮಾಡಿದ್ದಾರೆ.

See also  ದೇವಸ್ಥಾನಕ್ಕೆ ಚಪ್ಪಲಿ ಎಸೆದ ದುಷ್ಕರ್ಮಿಗಳು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು