News Kannada
Friday, September 30 2022

ಮೈಸೂರು

ದಸರಾ ಗಜಪಡೆಗೆ ಅದ್ದೂರಿ ಬೀಳ್ಕೊಡುಗೆ: ಮನಸಿಲ್ಲದ ಮನಸ್ಸಿನಿಂದ ತೆರಳಿದ ಆನೆಗಳು - 1 min read

Photo Credit :

ದಸರಾ ಗಜಪಡೆಗೆ ಅದ್ದೂರಿ ಬೀಳ್ಕೊಡುಗೆ: ಮನಸಿಲ್ಲದ  ಮನಸ್ಸಿನಿಂದ  ತೆರಳಿದ ಆನೆಗಳು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅದ್ದೂರಿ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆಗೆ ತಮ್ಮ ಸ್ವಸ್ಥಾನಗಳಿಗೆ ತೆರಳಲು  ಅರಮನೆಯ ಆವರಣದಲ್ಲಿ ಅದ್ದೂರಿಯಾಗಿ ಬೀಳ್ಕೊಟ್ಟು ಕಳುಹಿಸಿ ಕೊಡಲಾಯಿತು.
ಅರಮನೆಯ ಆವರಣದಲ್ಲಿ ಅರಮನೆಯ ಪುರೋಹಿತರಿಂದ ಎಲ್ಲಾ ದಸರಾ ಅನೆಗಳಿಗೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ಗೋಪಿ, ಗೋಪಾಲಕೃಷ್ಣ, ವಿಜಯಾ, ಮೇರಿ, ದುರ್ಗಾಪರಮೇಶ್ವರಿ, ರೇವತಿ, ಕಾವೇರಿ ಸೇರಿದಂತೆ 12 ಆನೆಗಳನ್ನು ಸಾಲಾಗಿ ನಿಲ್ಲಿಸಿ ಸಚಿವ ಮಹದೇವಪ್ಪ, ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಆನೆಗಳು ಸೊಂಡಿಲನ್ನು ಎತ್ತಿ ನಾಡಿನ ಜನತೆಗೆ ಮತ್ತೊಮ್ಮೆ ವಂದನೆ ಸಲ್ಲಿಸಿದವು.

ಕಳೆದ 40 ದಿನಗಳ ಹಿಂದೆ ಕಾಡಿನಿಂದ  ನಾಡಿಗೆ ಆಗಮಿಸಿ ಅರಮನೆಯ ಅಂಗಳದಲ್ಲಿ ಇಷ್ಟಪಟ್ಟದ್ದನ್ನು ತಿಂದು, ನಗರವನ್ನೆಲ್ಲಾ ಸುತ್ತಾಡಿ, ಸ್ವಚ್ಚಂದವಾಗಿ ಕಾಲ ಕಳೆದ 12 ಆನೆಗಳೂ ಇಂದು ತಮ್ಮ ತಮ್ಮ ಶಿಬಿರಗಳತ್ತ ಪಯಣ ಬೆಳೆಸಿದವು. ಜಂಬೂ ಸವಾರಿಯಂದು ದಣಿದಿದ್ದ ಆನೆಗಳು ನಿನ್ನೆದಿನ ಎಲ್ಲವನ್ನೂ ಮರೆತು ರಿಲ್ಯಾಕ್ಸ್ ಮೂಡ್ ನಲ್ಲಿ ಆರಾಮವಾಗಿ ಇದ್ದವು. ಇಂದು ಬೆಳಿಗ್ಗೆ ಜಿಲ್ಲಾಡಳಿತದ ವತಿಯಿಂದ ಅರ್ಜುನ ಸೇರಿದಂತೆ ಎಲ್ಲಾ ಆನೆಗಳಗೂ ಕೊನೆಯದಾಗಿ ಬಗೆ ಬಗೆಯ ತಿಂಡಿ ನೀಡಿ ಪ್ರೀತಿಯಿಂದ ಉಪಚರಿಸಲಾಯಿತು. ಇದರಿಂದಾಗಿಯೇ ಆನೆಗಳು ಕಾಡಿಗೆ ತೆರಳಲು ಇಷ್ಟವಿಲ್ಲದಿದ್ದರೂ, ಒಲ್ಲದ ಮನಸ್ಸಿನಿಂದ ಲಾರಿ ಏರಿ ನೆರೆದಿದ್ದವರಿಗೆ ಸೊಂಡಿಲಿನ ಮೂಲಕ ನಮಸ್ಕರಿಸಿ ಟಾಟಾ ಹೇಳಿ ತಮ್ಮ ಕೃತಜ್ಞತೆಯನ್ನು ತೋರಿದವು.

ನಂತರ  ಅರಮನೆಯ  ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್ ನಲ್ಲಿ ಆನೆಯ ಮಾವುತರಿಗೆ, ಕಾವಾಡಿಗಳಿಗೆ, ಅವರ ಕುಟುಂಬಸ್ಥರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂಧಿಗಳು, ಅಧಿಕಾರಿಗಳಿಗೆ ಉಪಹಾರ ಕೂಟ  ಏರ್ಪಡಿಸಿ ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಮಾವುತರು ಕಾವಾಡಿಗಳಿಗೆ ತಲಾ 7,500 ರೂ.ಗಳ ಗೌರವ ಧನ ನೀಡಿ ಅಭಿನಂಧಿಸಲಾಯಿತು. ಈ ಹಿಂದಿನ ವರ್ಷಗಳಲ್ಲಿ  ಇವರಿಗೆ ಬರೇ 5,000 ರೂ.ವನ್ನು ಗೌರವಧನವಾಗಿ ನೀಡಲಾಗಿತ್ತು  ಈ ಬಾರಿ ಎಲ್ಲಾ ಮಾವುತರೂ ಸೇರಿ ಗೌರವಧನ ಹೆಚ್ಚಸಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿದ್ದರಿಂದ ಈ ಬಾರಿ ಅವರಿಗೆ 2,500 ರೂ. ಹೆಚ್ಚಿಸಿ 7,500 ರೂ. ನೀಡಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಸುದ್ದಿಗಾರರಿಗೆ ತಿಳಿಸಿದರು.

ಆನೆಗಳ ಮಾವುತರ ಕುಟುಂಬದವರೂ ಅದರಲ್ಲೂ ಅವರ ಮಕ್ಕಳು ಸಂತಸದಿಂದ ಲಾರಿ ಹೇರಿ ಎಲ್ಲರಿಗೂ ಟಾಟಾ ನಗುಮೊಗದಿಂದಲೇ ಪಯಣ ಬೆಳೆಸಿದರು. ಈ ಸಂದರ್ಭದಲ್ಲಿ ಜಿಲ್ಲಾದಿಕಾರಿ ರಣದೀಪ್, ಅರಣ್ಯ ಅಧಿಕಾರಿ ಕರಿಕಾಳನ್, ಡಾ. ನಾಗರಾಜು, ಸೇರದಂತೆ ಇನ್ನೂ ಹಲವಾರುಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆನೆಗಳು ಕಾಡಿಗೆ ಮರಳುವುದನ್ನು ಬಹತೇಕ ಸಾರ್ವಜನಿಕರು ನೋಡಿ ಕಣ್ತುಂಬಿಕೊಂಡರು.

See also  ನನ್ನ ಕಂಡರೆ ಎಲ್ಲರಿಗೂ ಭಯ: ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು