News Kannada
Thursday, September 29 2022

ಮೈಸೂರು

ಸಂಬಳವಿಲ್ಲದೆ ಮನನೊಂದು ಆತ್ಮಹತ್ಯೆ ಯತ್ನಿಸಿದ ಫಾಲ್ಕಾನ್ ನೌಕರ - 1 min read

Photo Credit :

ಸಂಬಳವಿಲ್ಲದೆ ಮನನೊಂದು ಆತ್ಮಹತ್ಯೆ ಯತ್ನಿಸಿದ ಫಾಲ್ಕಾನ್ ನೌಕರ

ಮೈಸೂರು: ಕಳೆದ ಒಂದು ವರ್ಷದಿಂದಲೂ ವೇತನ ನೀಡದಿದಕ್ಕೆ ಮನನೊಂದ ಫಾಲ್ಕಾನ್ ಕಾರ್ಖಾನೆಯ ನೌಕರ ಕಾರ್ಖಾನೆಯ ಆವರಣದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

Falcon tyre employee attempts suicide in factory premises over non payment of salary-1ಆತ್ಮಹತ್ಯೆಗೆ ಯತ್ನಿಸಿದ ನೌಕರ ಕಿರಣ್ ರಾಜೇ ಅರಸ್. ಈತ ತಾನು ಕೆಲಸ ಮಾಡುತಿದ್ದ ಫಾಲ್ಕಾನ್ ಫ್ಯಾಕ್ಟರಿಯಲ್ಲಿ ಒಂದು ವರ್ಷದಿಂದ ಸಂಬಳ ನೀಡದೆ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಮನನೊಂದು ಆವರಣದಲ್ಲೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದು ಸಾವು ಬದುಕಿನ ನಡುವೆ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ವರ್ಷದಿಂದ ನಾಪತ್ತೆಯಾಗಿರುವ ಮಾಲಿಕರು:
ತೀವ್ರ ನಷ್ಟದ ಹಿನ್ನಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಫಾಲ್ಕಾನ್ ಫ್ಯಾಕ್ಟರಿಯನ್ನ ಮುಚ್ಚಲಾಗಿತ್ತು. ಈ ಕಾರ್ಖಾನೆಯಲ್ಲಿ 500 ಜನ ಖಾಯಂ ನೌಕರರಿದ್ದು 1500ಕ್ಕೂ ಹೆಚ್ಚು ಜನ ಹಂಗಾಮಿ ನೌಕರರಿದ್ದು ಕಾರ್ಖಾನೆ ಪುನರ್ ಆರಂಬಿಸುವಂತೆ ಕಳೆದ ವರ್ಷ 150ಕ್ಕೂ ಹೆಚ್ಚು ಜನ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ಮಧ್ಯ ಪ್ರವೇಶದಿಂದ ಫಾಲ್ಕಾನ್ ಕಾರ್ಖಾನೆ ಪುನಃ ಆರಂಭವಾಗಿತ್ತು. ಆದರೆ ಎರಡು ತಿಂಗಳ ಕಾಲ ಕಾರ್ಖಾನೆಯನ್ನ ನಡೆಸಿದ ಮಾಲೀಕ ಪುನಃ ಕಾರ್ಖಾನೆಯನ್ನ ಮುಚ್ಚಿದ್ದು ತಯಾರಾದ ವಸ್ತುಗಳು ಕಾರ್ಖಾನೆಯೊಳಗಿದ್ದು ಮಾಲೀಕ  ತಲೆ ಮರೆಸಿಕೊಂಡಿದ್ದಾನೆ. ಆದರೂ ನೌಕರರು ಯಾವುದೇ ಕೆಲಸವಿಲ್ಲದಿದ್ದರೂ ತಯಾರಾದ ವಸ್ತುಗಳನ್ನು ಹೊರ ಹೋಗದಂತೆ ಕಾವಲು ಕಾಯುತ್ತಿದ್ದಾರೆ ಈ ನೌಕರರು.

ಇವರಿಗೆ ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಹೀಗೆ ಸಂಬಳವಿಲ್ಲದೆ ಜೀವನ ಸಾಗಿಸುತ್ತಿರುವ ನೌಕರುಗಳಲ್ಲಿ 5 ಜನ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಆನಂದ್ ರಾಜ್, ಶಿವಪ್ರಕಾಶ್ ಮರಣ ಹೊಂದಿದ್ದಾರೆ.

See also  ಜಂಬೂ ಸವಾರಿಗೆ ಕಲಾ ತಂಡ-ಸ್ತಬ್ದ ಚಿತ್ರಗಳ ಮೆರಗು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು