News Kannada
Tuesday, September 27 2022

ಮೈಸೂರು

ಸಿಎಂ ವಿರುದ್ದ ಅಸಮಾಧಾನದ ಮಾತುಗಳನ್ನಾಡಿದ ಪರಮಾಪ್ತ ಸಿಎಂ ಇಬ್ರಾಹಿಂ! - 1 min read

Photo Credit :

ಸಿಎಂ ವಿರುದ್ದ ಅಸಮಾಧಾನದ ಮಾತುಗಳನ್ನಾಡಿದ ಪರಮಾಪ್ತ ಸಿಎಂ ಇಬ್ರಾಹಿಂ!

ಮೈಸೂರು: ಮೈಸೂರಿನಲ್ಲಿ ಮಹಾನ್ ಮಹಾನ್ ನಾಯಕರಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ನಾವೆಲ್ಲಾ ಶಿವಜೀನಗರದ ಸಾಬರು, ಅವರೆಲ್ಲಾ 5000 ಮೆಗಾವ್ಯಾಟ್ ಲೈನ್ ಗಳಿರುವವರು, ನಾವೆಲ್ಲಾ 50 ಕ್ಯಾಂಡರ್ ಬಲ್ಬ್ ಇದ್ದಗಾಹೆ ಎಂದು ಸಿಎಂ ವಿರುದ್ದವೇ ಪರಮಾಪ್ತ ಸಿಎಂ ಇಬ್ರಾಹಿಂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಹಾನ್ ಮಹಾನ್ ನಾಯಕರೇ ಇದ್ದಾರೆ, ನಾನೋ 50 ಕ್ಯಾಂಡಲ್ ಬಲ್ಪ್, ಅವರೋ 5000 ಮೆಗಾವ್ಯಾಟ್ ಲೈನ್, ಅಂತಹವರ ಬಗ್ಗೆ ನಾನೇನು ಹೇಳಲಿ ಎಂದು ಇಬ್ರಾಹಿಂ ರಾಜಕಾರಣದಲ್ಲಿ ಯಾವತ್ತೂ ನಂಬಿಕೆ, ವಿಶ್ವಾಸ, ಪ್ರಗತಿ ಬಹಳ ಮುಖ್ಯ. ನಾವಂತೂ ಹಣ, ಅಧಿಕಾರದ ಹಿಂದೆ ಬಿದ್ದು ಓಡುವಂತಹ ಸಿದ್ಧಾಂತದಲ್ಲಿ ಬೆಳೆದವರಲ್ಲ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
 
ಎಲ್ಲಾ ಕಾಲದಲ್ಲೂ ಜನರಿಗೆ ಮೋಸ ಮಾಡಲಾಗದು, ಜನ ಕೂಡ ಎಚ್ಚೆತ್ತಿದ್ದಾರೆ, ನಾನು ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ ಚುನಾವಣೆ ಬರಲಿ ಆಗ ಮಾತನಾಡುತ್ತೇನೆ. ಇತ್ತೀಚಿಗೆ ಆಗುತ್ತಿರುವ ಬೆಳವಣಿಗೆಗಳಿಂದ ಮನಸ್ಸಿಗೆ ನೋವಾಗಿದೆ ಆಗಬಾರದ್ದು ಆಗಿಹೋಗುತ್ತಿದೆ ಎಂದರು.  ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತರು, ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇಟ್ಟುಕೊಂಡಿದ್ದೆವು, ಹಾಗೆ ಆಗಲಿಲ್ಲವಲ್ಲಾ ಎಂಬ ನೋವಿದೆ. ಇನ್ನೂ ಒಂದುವರೆ ವರ್ಷ ಸಮಯವಿದೆ, ನೋಡೋಣ. ನನ್ನ ಮೇಲೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಪ್ರೀತಿ-ವಿಶ್ವಾಸ ಇಟ್ಟುಕೊಂಡಿದ್ದಾರೆ ಅವರೆಲ್ಲರಿಗೂ ಚಿರರುಣಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದು ಕಾಲದಲ್ಲಿ ಆಪ್ತ ಗೆಳೆಯನಾಗಿ, ಮಾರ್ಗದರ್ಶಕರಾಗಿದ್ದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಮ್ಮ ಗೆಳೆಯನ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನೂ ಜೆ.ಡಿ.ಎಸ್ ಪಕ್ಷಕ್ಕೆ ಹೋಗುತ್ತೀರ ಎಂಬ ಮಾದ್ಯಮದವರ ಪ್ರಶ್ನೆಗೆ ದೇವೇಗೌಡರು ಮತ್ತು ನಮ್ಮ ಬಾಂಧವ್ಯಕ್ಕೆ ಯಾವತ್ತೂ ಕೊರತೆಯಾಗಿಲ್ಲ, ದೇವೇಗೌಡರು ಕರ್ನಾಟಕದ ತುಳಸೀ ದಳ ಇದ್ದಂತೆ, ತುಳಸೀದಳದ ಮಹತ್ವ ಏನೂ ಅಂತಾ ಎಲ್ಲರಿಗೂ ತಿಳಿದಿದೆ ಎಂದು ಸಿ.ಎಂ.ಇಬ್ರಾಹಿಂ ಜೆಡಿಎಸ್ ಪಕ್ಷಕ್ಕೆ ಹೋಗುವ ಸೂಚನೆ ನೀಡಿದರು.  

    
 

See also  ಬೈಕ್ ಗೆ ಲಾರಿ ಡಿಕ್ಕಿ: ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು