News Kannada
Sunday, September 25 2022

ಮೈಸೂರು

ಮೊಬೈಲ್ ಕರೆಯಿಂದ ಖಾತೆಯಿಂದ ಹಣ ಕಳೆದುಕೊಂಡಿದ್ದೇಗೆ ? - 1 min read

Photo Credit :

ಮೊಬೈಲ್ ಕರೆಯಿಂದ ಖಾತೆಯಿಂದ ಹಣ ಕಳೆದುಕೊಂಡಿದ್ದೇಗೆ ?

ಮೈಸೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳು ಹೆಚ್ಚುತ್ತಿದ್ದು ಇದಕ್ಕೆ ವಿದ್ಯಾವಂತರೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಇಲ್ಲಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಮೊಬೈಲ್ ಗೆ ಬಂದ ಅನಾಮದೇಯ ಕರೆಗೆ ತನ್ನ ಬ್ಯಾಂಕ್ ನ ಸಂಪೂರ್ಣ ವಿವರ ನೀಡಿ 35 ಸಾವಿರ ಕಳೆದು ಕೊಂಡ ಘಟನೆ ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಡೆದ ಘಟನೆ:

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಯ ಮೊಬೈಲ್ ಗೆ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ ಅನಾಮಧೇಯ ಕರೆ ಬಂದಿದ್ದು ನಾವು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಿಯಿಸಿಕೊಂಡ ವ್ಯಕ್ತಿ ಎಟಿಎಂ ಕಾರ್ಡ್ ಸಮಸ್ಯೆಗೆ ಸಂಬಂಧಿಸಿದಂತೆ ಕರೆ ಮಾಡಿರುವುದಾಗಿ ತಿಳಿಸಿದ್ದು ನಂತರ ಆ ವ್ಯಕ್ತಿ ಕೇಳಿದ ಎಲ್ಲ ಮಾಹಿತಿಯನ್ನು ಮಹಿಳಾ ಅಧಿಕಾರಿ ನೀಡಿ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕ್ಷಣಾರ್ಧದಲ್ಲಿ ಮೊಬೈಲ್ ಗೆ ಬ್ಯಾಂಕ್ ಖಾತೆಯಿಂದ 35 ಸಾವಿರ ಹಣ ನಗದೀಕರಣಗೊಂಡಿದೆ ಎಂಬ ಸಂದೇಶ ಬಂದಿದೆ. ಹಣ ಕಳೆದು ಕೊಂಡ ಮಹಿಳಾ ಅಧಿಕಾರಿ ತಕ್ಷಣ ಮಂಡಿ ಪೊಲೀಸ್ ಠಾಣೆ ದೂರು ನೀಡಿದ್ದಾಳೆ.

24 ಗಂಟೆಯೊಳಗೆ 35 ಸಾವಿರ ಹಣ ಮರಳಿ ಅಕೌಂಟ್ ಗೆ:

ದೂರಿನ ಅನ್ವಯ ಎಚ್ಚೆತ್ತ ಮಂಡಿ ಪೊಲೀಸರು ಸೈಬರ್ ಪೊಲೀಸರನ್ನು ಸಂಪರ್ಕಿಸಿ ಹಣ ಕಳೆದುಕೊಂಡವರ ಖಾತೆಯಿಂದ ಹಣ ಎಲ್ಲಿಗೆ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಪಡೆದು ವಂಚಕರಿಗೆ ಹಣ ಸೇರುವುದನ್ನು ತಪ್ಪಿಸಿದ್ದಾರೆ. ಮೋಸ ಹೋಗಿದ್ದು ಗೊತ್ತಾದ ತಕ್ಷಣ ಸೈಬರ್ ಪೊಲೀಸರನ್ನು ಸಂಪರ್ಕಿಸಿದ ಪರಿಣಾಮ ಹಣ ವಂಚಕರ ಪಾಲಾಗುವುದು ತಪ್ಪಿದೆ ಎನ್ನುತ್ತಾರೆ ಹಣ ಕಳೆದುಕೊಂಡ ಸಮಾಜ ಕಲ್ಯಾಣ ಮಹಿಳಾ ಅಧಿಕಾರಿ.

See also  ಅರಣ್ಯ ಮಹಿಳಾ ಸಿಬ್ಬಂದಿ ಜೊತೆ ಯುವಕರ ಅಸಭ್ಯ ವರ್ತನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು