News Kannada
Monday, October 03 2022

ಮೈಸೂರು

ಡೆಡ್ ಸ್ಟೋರೆಜ್ ನತ್ತ ಕೆಆರ್ ಎಸ್ ಜಲಾಶಯ - 1 min read

Photo Credit :

ಡೆಡ್ ಸ್ಟೋರೆಜ್ ನತ್ತ ಕೆಆರ್ ಎಸ್ ಜಲಾಶಯ

ಮೈಸೂರು: ಕಾವೇರಿ ಕಣಿವೆಯಲ್ಲಿ ಭೀಕರ ಬರಗಾಲದ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಈ ವೇಳೆಗೆ ಕೊಡಗಿನಲ್ಲಿ ಮಳೆ ನಿಂತರೆ ಸಾಕಪ್ಪಾ ಎಂದು ಪ್ರಾರ್ಥಿಸುತ್ತಿದ್ದ ಮಂದಿ ಇದೀಗ ಮಳೆ ಬರಲೆಂದು ದೇವರ ಮೊರೆ ಹೋಗುವ ಪರಿಸ್ಥಿತಿ ಬಂದೊದಗಿದೆ.

ಕಾವೇರಿ ತವರಲ್ಲೇ ನೀರಿಗೆ ಬರ ಬಂದಿರುವಾಗ ಅದನ್ನೇ ನಂಬಿ ಬದುಕುವ ಕಾವೇರಿ ಕಣಿವೆಯ ಜನರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಕ್ಷಣ ಊಹಿಸಿದರೆ ಅರ್ಥವಾಗಿಬಿಡುತ್ತದೆ. ತಮಿಳುನಾಡಿನ ಒತ್ತಡ, ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕೆಆರ್ ಎಸ್ ಜಲಾಶಯದಿಂದ ನೀರು ತಮಿಳುನಾಡಿಗೆ ಹರಿದು ಹೋದ ಪರಿಣಾಮ ಜಲಾಶಯ ಭಣಗುಟ್ಟುತ್ತಿದೆ. ಬಿರುಬೇಸಿಗೆಯಲ್ಲಿ ತಲುಪಬೇಕಾದ ಡೆಡ್ ಸ್ಟೊರೇಜ್ ಅನ್ನು ಅಕ್ಟೋಬರ್ ತಿಂಗಳಲ್ಲೇ ತಲುಪಿದೆ. ಹೀಗಿರುವಾಗ ಮುಂದೆ ಬರಲಿರುವ ಬೇಸಿಗೆಯಲ್ಲಿ ನೀರಿಗೆ ಯಾವ ರೀತಿಯ ಹಾಹಾಕಾರ ಪ್ರಾರಂಭವಾಗಬಹುದು ಎಂಬುದನ್ನು ಯೋಚಿಸಿದರೆ ಭಯವಾಗುವುದಂತು ನಿಜ.

ಈಗಾಗಲೇ ಬಹಳಷ್ಟು ಹಳ್ಳಿಗಳಲ್ಲಿ ನೀರಿಗೆ ತೊಂದರೆ ಕಾಣಿಸಿದ್ದು, ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವ ಸ್ಥಿತಿಯುಂಟಾಗಿದೆ. ಇದೀಗ ಕೆಆರ್ ಎಸ್ ಜಲಾಶಯ ದಿನದಿಂದ ದಿನಕ್ಕೆ ತಳಮಟ್ಟವನ್ನು ತಲುಪುತ್ತಿದ್ದು, ಇದೇ ನೀರನ್ನು ನಂಬಿರುವ ಮೈಸೂರು, ಬೆಂಗಳೂರು ನಗರಗಳ ಪರಿಸ್ಥಿತಿ ಚಿಂತಾಜನಕವಾಗುವುದರಲ್ಲಿ ಸಂಶಯವಿಲ್ಲ. ಗರಿಷ್ಠ 124.80 ಅಡಿ ಎತ್ತರದ ಜಲಾಶಯದಲ್ಲಿ ಗುರುವಾರ ಸಂಜೆಗೆ ಕೇವಲ 78.70 ಅಡಿಗಳಷ್ಟು ಮಾತ್ರ ನೀರಿದೆ. ಹೀಗಾಗಿ  ಜಲಾಶಯದ `ಡೆಡ್ ಸ್ಟೋರೇಜ್’ ಮಟ್ಟವಾಗಿರುವ 74 ಅಡಿಯನ್ನು ತಲುಪಲು ಕೆಲವೇ ದಿನಗಳು ಬಾಕಿಯಿದೆ. ಒಂದು ವೇಳೆ ಡೆಡ್ ಸ್ಟೋರೆಜ್ ತಲುಪಿದರೆ ಮುಂದಿನ ದಿನಗಳನ್ನು ಊಹಿಸಲು ಅಸಾಧ್ಯವಾಗುತ್ತದೆ.

ಸುಪ್ರಿಂಕೋರ್ಟ್, ಇದೇ ಅಕ್ಟೋಬರ್ 18ರಂದು ಆದೇಶ ಹೊರಡಿಸಿ ನಿತ್ಯ ತಮಿಳುನಾಡಿಗೆ 2,000 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿತ್ತು. ಆದರೆ, ಆದೇಶವನ್ನು ಅ. 24ವರೆಗೆ ಪಾಲಿಸಿರಲಿಲ್ಲ. ಆದ್ದರಿಂದ, 4,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುವ ಮೂಲಕ ಕೊರತೆ ಪ್ರಮಾಣವನ್ನು ಸರಿದೂಗಿಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಅ. 24ರಂದು 82.13 ಅಡಿ ಇದ್ದ ನೀರಿನ ಮಟ್ಟ ಗುರುವಾರ ಸಂಜೆ 78.70ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 105.29 ಅಡಿ  ಇತ್ತು. ಅಷ್ಟು ನೀರು ಇದ್ದರೂ ಬೇಸಿಗೆಯಲ್ಲಿ ಸಮಸ್ಯೆಯಾಗಿತ್ತು. ಗುರುವಾರ ಜಲಾಶಯದಿಂದ 6,133 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿತ್ತು. ಒಳಹರಿವಿನ ಪ್ರಮಾಣ ಸಂಪೂರ್ಣ ತಗ್ಗಿದ್ದು ಕೇವಲ 274 ಕ್ಯೂಸೆಕ್ ಗೆ ಬಂದು ತಲುಪಿದೆ.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲೂ ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಮಳೆ ಬಂದರೂ ಅದರಿಂದ ಜಲಾಶಯ ತುಂಬುವ ಸಾಧ್ಯತೆಯಂತು ಇಲ್ಲವೇ ಇಲ್ಲ. ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಂತು ಖಚಿತ ಹೀಗಿರುವಾಗ ಈಗಿನಿಂದಲೇ ಇದಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯ ಬೇಕಾದ ಸರ್ಕಾರ ಸಮಾವೇಶ, ಚುನಾವಣೆ, ನಿಗಮಮಂಡಳಿಗೆ ಅಧ್ಯಕ್ಷರ ಆಯ್ಕೆ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಜನರ ಸಂಕಷ್ಟ ಮಾತ್ರ ಕೇಳೋರೇ ಇಲ್ಲದಾಗಿರುವುದು ಮಾತ್ರ ವಿಷಾದದ  ಸಂಗತಿಯಾಗಿದೆ.

See also  ಕೆಆರ್ ಎಸ್ ನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ:ರೈತರ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು