News Kannada
Saturday, October 01 2022

ಮೈಸೂರು

ಬಾಲಕಿಯರ ಬಾಲಮಂದಿರದಲ್ಲಿ ಹತ್ತಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥ - 1 min read

Photo Credit :

ಬಾಲಕಿಯರ ಬಾಲಮಂದಿರದಲ್ಲಿ ಹತ್ತಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥ

ಮೈಸೂರು: ಸಮಯಕ್ಕೆ ಸರಿಯಾಗಿ ಆಹಾರ ನೀಡದೆ ಬಾಲ ಮಂದಿರದ ಹತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಕೆ.ಆರ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

14 children of Balamandira take ill, doctors suspect acute gastroenteritis-1ನಗರದ ಲಲಿತ್ ಮಹಲ್ ರಸ್ತೆಯಲ್ಲಿರುವ ಬಾಲಕಿಯರ ಬಾಲಮಂದಿರದಲ್ಲಿ ಹತ್ತಕ್ಕೂ ಹೆಚ್ಚು ಬಾಲಕಿಯರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನ ಕೆ.ಆರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲಾ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದರೆ. ಈ ಬಾಲಾ ಮಂದಿರದಲ್ಲಿ ಅನಾಥ ಬಾಲಕಿಯರು ತಂದೆ ತಾಯಿ ಸರಿಯಾಗಿ ನೋಡಿಕೊಳ್ಳದ ಬಾಲಕಿಯರು ಸೇರಿದಂತೆ ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಬಾಲಕಿಯರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಈ ಬಾಲಕಿಯರ ಬಾಲಮಂದಿರದಲ್ಲಿ ಸರಿಯಾಗಿ ಸಮಯಕ್ಕೆ ಊಟ ನೀಡುವುದಿಲ್ಲ. ನೀಡುವ ಊಟವೂ ಕಳಪೆಯಾಗಿದ್ದು ಇದರಿಂದ ಇಲ್ಲಿರುವ ಬಾಲಕಿಯರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಬಗ್ಗೆ ಬಾಲ ಮಂದಿರದ ಉಸ್ತುವಾರಿಗೆ ಹೇಳಿದರೂ ನಮಗೆ ಬಯ್ಯುತ್ತಾರೆ. ಹೆಚ್ಚಿಗೆ ಮಾತಾಡಿದರೆ ಊಟ ನೀಡದೆ ಒದೆಯುತ್ತಾರೆ ಎನ್ನುತ್ತಾರೆ ಹೆಸರು ಹೇಳದ ಬಾಲ ಮಂದಿರದ ಬಾಲಕಿ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ರಾಧಾ ಹೇಳುವುದೇ ಬೇರೆ, ನಾಲ್ಕು ಮಕ್ಕಳಿಗೆ ವೈರಲ್ ಫಿವರ್ ಕಾಣಿಸಿಕೊಂಡಿದ್ದು ಅವರನ್ನ ಚಿಕಿತ್ಸೆಗಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರೊಂದಿಗೆ ಉಳಿದ ಮಕ್ಕಳು ಭಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಾಸ್ಯಸ್ಪದ ಹೇಳಿಕೆ ನೀಡಿದ್ದಾರೆ.

See also  ಹಳ್ಳಕ್ಕೆ ಉರುಳಿದ ಬಸ್: ತಪ್ಪಿದ ಭಾರೀ ಅನಾಹುತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು