News Kannada
Thursday, September 29 2022

ಮೈಸೂರು

ಕಾರಾಗೃಹಕ್ಕೆ ಎಡಿಜಿಪಿ ಬೇಟಿ.. ಇಬ್ಬರ ಅಮಾನತಿಗೆ ಸೂಚನೆ - 1 min read

Photo Credit :

ಕಾರಾಗೃಹಕ್ಕೆ ಎಡಿಜಿಪಿ ಬೇಟಿ.. ಇಬ್ಬರ ಅಮಾನತಿಗೆ ಸೂಚನೆ

ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ವಿಚಾರಣಾ ಖೈದಿ ಕೊಲೆಯಾದ ಹಿನ್ನಲೆಯಲ್ಲಿ ಜೈಲಿಗೆ ಕಾರಾಗೃಹದ ಎಡಿಜಿಪಿ ಭೇಟಿ ಇಬ್ಬರ ಅಮಾನತಿಗೆ ಸೂಚನೆ ನೀಡಿದ್ದಾರೆ.

ಮೈಸೂರು ಜೈಲಿನಲ್ಲಿ ನಿನ್ನೆ ಇಬ್ಬರು ವಿಚಾರಣಾ ಖೈದಿಗಳು ನಡುವೆ ಮಾರಾಮಾರಿ ನಡೆದು ಅದರಲ್ಲಿ ಮುಸ್ತಾಫಾ ಎಂಬ ವಿಚಾರಣೆ ಖೈದಿ ಸಾವನ್ನಪ್ಪಿದ್ದು ಈ ಹಿನ್ನಲೆಯಲ್ಲಿ ಕಾರಾಗೃಹ ಇಲಾಖೆಯ ಎಡಿಜಿಪಿ ಸತ್ಯನಾರಾಯಣ್ ರಾವ್ ಬೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಮೈಸೂರು ಕಾರಾಗೃಹದ ಅಧೀಕ್ಷಕ ಆನಂದ್ ರೆಡ್ಡಿ ಹಾಗೂ ಅಧೀಕ್ಷಕಿ ಎ.ಸಿ ದಿವ್ಯಾ ಶ್ರೀ ಅವರಿಂದ ಮಾಹಿತಿ ಪಡೆದು, ಘಟನೆ ನಡೆದ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗಳನ್ನು ಕರ್ತವ್ಯ ಲೋಪದ ಹಿನ್ನಲ್ಲೆಯಲ್ಲಿ ಅಮಾನತು ಮಾಡುವ ಸೂಚನೆ ನೀಡಿದ್ದಾರೆ.

ತಡರಾತ್ರಿ ನಡೆದ ಮರಣೋತ್ತರ ಪರೀಕ್ಷೆ:
ಮಂಗಳೂರಿನಿಂದ ರಾತ್ರಿ 10 ಗಂಟೆಯ ಸಮಯಕ್ಕೆ ಶವಗಾರಕ್ಕೆ ಆಗಮಿಸಿದ ಸಂಬಂಧಿಕರ ಹೇಳಿಕೆಗಳನ್ನು ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟರ್ ಶಿಲ್ಪಶ್ರೀ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮದ್ಯರಾತ್ರಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಟೇಬಲ್ ಸ್ಪೋನಿನಿಂದ ಇರಿದು ಕೊಲೆ:
ಹಳೆ ದ್ವೇಷದ ಹಿನ್ನಲೆಯಲ್ಲಿ ವಿಚಾರಣಾ ಖೈದಿ ಮುಸ್ತಾಫಾನನ್ನು ಇನ್ನೊಬ್ಬ ವಿಚಾರಣಾ ಖೈದಿ ಕಿರಣ್ ಶೇಟ್ಟಿ ಊಟದ ಹಾಲ್ ನಲ್ಲಿ ಇದ್ದ ಟೇಬಲ್ ಸ್ಪೋನ್ ನಿಂದ ಇರಿದು ಹತ್ಯೆ ಮಡಿದ್ದು ಚಾಕುವಿನಿಂದ ಅಲ್ಲ ಎಂದು ಮೈಸೂರು ಪೊಲೀಸ್ ಕಮಿಷನರ್ ಸುಬ್ರಮಣ್ಯೇಶ್ವರ್ ರಾವ್ ತಿಳಿಸಿದ್ದು ಈ ಸಂಬಂದ ಕಿರಣ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ನಡೆದ ದೃಶ್ಯ ಜೈಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

924 ಖೈದಿಗಳಿಗೆ 10 ಸಿಬ್ಬಂದಿ:
ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ 924 ಮಂದಿ ಖೈದಿಗಳಿದ್ದು ಇವರಿಗೆ ಭದ್ರತೆ 10 ಮಂದಿ ಮಾತ್ರ ಸಿಬ್ಬಂದಿ ಇದ್ದಾರೆ. ಜೊತೆಗೆ ಕಾರಾಗೃಹಕ್ಕೆ ಮೀಸಲಾಗಿದ್ದ ಪೊಲೀಸರನ್ನು ನಿನ್ನೆ ಟಿಪ್ಪು ಜಯಂತಿಗೆ ಬೇರೆ ಕಡೆ ನಿಯೋಜನೆ ಮಾಡಲಾಗಿತ್ತು. ಜೊತೆಗೆ ಖೈದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಡೆ ಭದ್ರತೆಗೂ ನಿಯೋಜನೆ ಮಾಡಲಾಗಿದ್ದು ಕಾರಾಗೃಹದಲ್ಲಿ 10 ಜನ ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಇವರಗಳು ಜೈಲಿನ ಆವರಣದ, ಅಡುಗೆ ಮನೆ, ಜೈಲಿನೊಳಗಿನ ಆಸ್ಪತ್ರೆ ಕಡೆಗೆ ನಿಯೋಜನೆಯಾಗಿದ್ದು ಇದನ್ನೆಲ್ಲಾ ತಿಳಿದು ಸಮಯ ನೋಡಿ ಕಿರಣ್ ಶೆಟ್ಟಿ ಈ ಕೃತ್ಯ ನಡೆಸಿದ್ದಾನೆ.

See also  ಬೆಟ್ಟದ ನಂದಿಗೆ 40 ಬಗೆಯ ದ್ರವ್ಯಗಳಿಂದ ಮಹಾಭಿಷೇಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು