ಮೈಸೂರು: ನ22-2016ರ ಜನವರಿಯಲ್ಲಿ ಸಿಂಡಿಕೇಟ್ ತಮ್ಮ ವಿರುದ್ದ ಕೈಗೊಂಡ ಶಿಸ್ತು ಕ್ರಮದ ವಿರುದ್ದವಾಗಿ ಮಾದ್ಯಮದವರಿಗೆ ಹೇಳಿಕೆ ನೀಡಿದ ಆಧಾರದ ಮೇಲೆ ಮೈಸೂರು ವಿವಿಯ ಪ್ರಾಧ್ಯಪಕರೊಬ್ಬರನ್ನು ಕಡ್ಡಯವಾಗಿ ನಿವೃತ್ತಗೊಳಿಸಿ ಸಿಂಡಿಕೇಟ್ ತೀರ್ಮಾನ ಕೈಗೊಂಡಿದೆ.
ಹೀಗೆ ಕಡ್ಡಯ ನಿವೃತ್ತಿ ಶಿಕ್ಷೆಗೆ ಗುರಿಯಾದ ಮೈಸೂರು ವಿವಿಯ ಪ್ರಾಧ್ಯಪಕ ಪ್ರೋ.ಶಿವರಾಜ್. ಇವರು 2009ರಲ್ಲಿ ಸರ್ಕಾರದ ಗಮನಕ್ಕೆ ತಾರದೆ ವಿದೇಶಿ ವಿವಿಗಳೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡ ಆದಾರದ ಮೇಲೆ ತನಿಖೆ ನಡೆಸಲಾಗಿ ತನಿಖೆಯಲ್ಲಿ ಇವರು ವಿವಿಯ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು ಈ ಹಿನ್ನಲೆಯಲ್ಲಿ 2016ರ ಜನವರಿಯಲ್ಲಿ ಸಿಂಡಿಕೇಟ್ ಸಭೆಯಲ್ಲಿ ಪ್ರೋ.ಶಿವರಾಜ್ ಅವರ ವೇತನವನ್ನು ಕನಿಷ್ಟ ವೇತನಕ್ಕೆ ಇಳಿಸಿತ್ತು.
ಇದನ್ನು ಪ್ರಶ್ನಿಸಿದ ಪ್ರೋ.ಶಿವರಾಜ್ ಮಾದ್ಯಮಗಳಿಗೆ ಬಹಿರಂಗವಾಗಿ ಕುಲಪತಿ ವಿರುದ್ದ ಹೇಳಿಕೆ ನೀಡಿದರು. ಜೊತೆಗೆ ತಾವು ಕೆಲಸ ಮಾಡುವ ಮೈಸೂರು ವಿವಿಯಲ್ಲಿ ಮೂರು ಕಡೆ ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ಹಣ ಪಡೆದ ಆರೋಪದ ಹಿನ್ನಲೆಯಲ್ಲಿ ಇವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸಭೆ ತೀರ್ಮಾನ ಕೈಗೊಂಡಿದೆ.