News Kannada
Monday, October 03 2022

ಮೈಸೂರು

ಡಿಸೆಂಬರ್ 7ಕ್ಕೆ ಮೈಸೂರು ಪಾಲಿಕೆಯ ಮೇಯರ್ ಚುನಾವಣೆ - 1 min read

Photo Credit :

ಡಿಸೆಂಬರ್ 7ಕ್ಕೆ ಮೈಸೂರು ಪಾಲಿಕೆಯ ಮೇಯರ್ ಚುನಾವಣೆ

ಮೈಸೂರು: ಮೈಸೂರು ಪಾಲಿಕೆಯ ಮೇಯರ್-ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 7 ರಂದು ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಧಿಕಾರದ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಪಾಲಿಕೆಯ 4ನೇ ಅವಧಿಯ ಮೇಯರ್ ಸ್ಥಾನವು ಸಾಮಾನ್ಯವರ್ಗಕ್ಕೆ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗುತ್ತಿದ್ದಂತೆ ಅಧಿಕಾರಕ್ಕಾಗಿ ಪೈಪೋಟಿ ಶುರುವಾಗಿದ್ದು, ಉಭಯ ಚುನಾವಣೆ ಡಿಸೆಂಬರ್ 7ರಂದು ನಡೆಯಲಿದ್ದು ಈಗಾಗಲೇ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆ ಜೋರಾಗಿದೆ.

ಪ್ರಸಕ್ತ ಅಧಿಕಾರ ಅವಧಿಯಲ್ಲಿ ದಳ ಮತ್ತು ಕಮಲದ ದೋಸ್ತಿ ಮುಂದುವರಿಸಲು ವೇದಿಕೆ ಸಜ್ಜು ಮಾಡಿಕೊಳ್ಳಲಾಗುತ್ತಿದೆ ಆದರೆ ಬಿಜೆಪಿಗಿಂತ ಹೆಚ್ಚಿನ ಸಂಖ್ಯಾಬಲ ಹೊಂದಿರುವ ಜೆಡಿಎಸ್ ಮೇಯರ್ ಸ್ಥಾನಕ್ಕೆ ಪಟ್ಟುಹಿಡಿದಿದ್ದು, ಇದರಿಂದ ಈ ಸಲವೂ ಕಮಲಕ್ಕೆ ಮೇಯರ್ ಸಿಗುವುದು ಕಷ್ಟಕರವಾಗಿದೆ. ಇನ್ನೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಮಲ ಪಡೆ ಅನಿವಾರ್ಯವಾಗಿ ದಳದೊಂದಿಗೆ ಮೈತ್ರಿ ಮುಂದುವರಿಸುವ ಸಾಧ್ಯತೆ ಹೆಚ್ಚು. ಆದರೆ ಅಧಿಕಾರ ಎಂಬ ಮಾಯೆಗಾಗಿ ದೋಸ್ತಿ ಮುರಿದರೆ, ಅದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹೊಂಚು ಹಾಕಿ ಕುಳಿತಿದೆ. ಇದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಅವಕಾಶ ಮಾಡಿಕೊಡುವುದು ಕಡಿಮೆ. ಹೀಗಾಗಿ, ಜೆಡಿಎಸ್ ಗೆ ಮೇಯರ್, ಬಿಜೆಪಿಗೆ ಉಪಮೇಯರ್ ಸ್ಥಾನ ಹಂಚಿಕೊಂಡು ಅಧಿಕಾರ ನಡೆಸುವ ಲೆಕ್ಕಾಚಾರವನ್ನು ಹಾಕಿಕೊಂಡಿವೆ.

ಮೇಯರ್ ಗಿರಿಗೆ ಲಾಭಿ:
ಮೇಯರ್ ಸ್ಥಾನಕ್ಕೆ ಮೂರು ಪಕ್ಷದಲ್ಲೂ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಜೆಡಿಎಸ್ ನಲ್ಲಿ ಪಾಲಿಕೆ ಆಡಳಿತ ಪಕ್ಷದ ನಾಯಕ ಕೆ.ಟಿ.ಚಲುವೇಗೌಡ, ಎಂ.ಜೆ.ರವಿಕುಮಾರ್, ಕೆ.ವಿ.ಮಲ್ಲೇಶ್ ಈ ಸ್ಥಾನಕ್ಕಾಗಿ ರೇಸ್ ನಲ್ಲಿರುವ ಪ್ರಮುಖರು. ಈ ಸ್ಥಾನ ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ರಾಜಕೀಯ ಪ್ರಾರಂಭಿಸಿದ್ದಾರೆ. ಬಿಜೆಪಿ ಸದಸ್ಯರಿಗೆ ಮೇಯರ್ ಗಿರಿ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿದ್ದು, ಆದರೂ ಪ್ರಯತ್ನ ಮುಂದುವರಿದಿದೆ. ಇದು ವ್ಯರ್ಥ ಪ್ರಯತ್ನ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಕಳೆದ ಸಲದಂತೆ ಉಪಮೇಯರ್ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಲು ಚಿಂತಿಸಿದೆ. ವಿವೇಕಾನಂದ ನಗರದ ಸೀಮಾ ಪ್ರಸಾದ್, ಹುಡ್ಕೋ ಬಡಾವಣೆಯ ಪುಷ್ಪಾವತಿ, ರಾಜೇಂದ್ರನಗರದ ರತ್ನಾ ಉಪಮೇಯರ್ ಗಾಗಿ ಪೈಪೋಟಿ ನಡೆಸಿದ್ದಾರೆ.

ಮೇಯರ್ ಗಾದಿಗೆ ಕಾಂಗ್ರೆಸ್ ಕಾರ್ಯಚರಣೆ:
ಮುಕ್ತ ಅವಕಾಶವನ್ನು ಇಟ್ಟುಕೊಂಡಿರುವ ಕಾಂಗ್ರೆಸ್, ಮೇಯರ್ ಗಿರಿಗೆ ಪೈಪೋಟಿ ನೀಡುವ ಮೂಲಕ ಕಮಲ ಮತ್ತು ದಳದ ಮುಖಂಡರ ನಿದ್ದೆಗೆಡಿಸಲು ಮುಂದಾಗಿದೆ. ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಶಾಸಕರು ಸಭೆ ಸೇರಿ ರಾಜಕೀಯ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದು, ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿರುವ ಆ ಪಕ್ಷವು, ರಾಜಕೀಯದಲ್ಲಿ ಏನಾದರೂ ಆಗಬಹುದು ಎನ್ನುವ ಆಶಾಭಾವನೆಯೊಂದಿಗೆ ಮುನ್ನಡೆಯುತ್ತಿದೆ. ಕಳೆದ ಸಲ ಎಸ್ಡಿಪಿಐನ 3 ಹಾಗೂ ಇಬ್ಬರು ಪಕ್ಷೇತರರ ಬೆಂಬಲ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಕಳೆದ ಬಾರಿ ಜೆಡಿಎಸ್, ಬಿಜೆಪಿ ಮೈತ್ರಿಗೆ ಮತ ಹಾಕಿದ ಪಕ್ಷೇತರರೂ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿಯ ಸದಸ್ಯರನ್ನು ಈ ಬಾರಿ ಸೆಳೆಯಲು ಕಾರ್ಯಾಚರಣೆ ನಡೆಸಿದೆ ಎನ್ನಲಾಗುತ್ತಿದೆ.

See also  ಈ ಬಾರಿ ಅರಮನೆಯ ದಸರಾಗೆ ಸಾರ್ವಜನಿಕರು, ಮಾಧ್ಯಮಗಳಿಗೆ ನಿರ್ಬಂಧ

ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ:
ಒಟ್ಟು ಸದಸ್ಯರ ಸಂಖ್ಯೆ 65 ಪೈಕಿ ಕಾಂಗ್ರೆಸ್ 21, ಜೆಡಿಎಸ್ 22,  ಬಿಜೆಪಿ 13, ಎಸ್ಡಿಪಿಐ 3, ಪಕ್ಷೇತರ 6 ಸದಸ್ಯರ ಬಲಾಬಲ ಇದೆ. ಕಾಂಗ್ರೆಸ್ ಗೆ ಎಸ್ಡಿಪಿಐ 3 ಸದಸ್ಯರು, 3 ಶಾಸಕರು, 1 ಎಂಎಲ್ ಸಿ ಬೆಂಬಲವಿದೆ. ಜೆಡಿಎಸ್ ಗೆ ಒಬ್ಬರು ಶಾಸಕರು ಹಾಗೂ ಒಬ್ಬರು ಎಂಎಲ್ ಸಿ, ಬಿಜೆಪಿಗೆ ಒಬ್ಬ ಸಂಸದರ ಬೆಂಬಲವಿದೆ. ಪಕ್ಷೇತರರ ಬೆಂಬಲವೇ ಚುನಾವಣೆಯಲ್ಲಿ ನಿರ್ಣಾಯಕವಾಗಿದೆ. ಮೇಯರ್ ಆಗಲು 39 ಸದಸ್ಯರ ಮತಬೇಕು. ಕಳೆದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟಕ್ಕೆ 41, ಕಾಂಗ್ರೆಸ್ ಗೆ 33 ಮತಗಳು ಬಿದ್ದಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು