ಮೈಸೂರು: ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಅಧಿಕಾರದಲ್ಲಿ ಇರದೆ ಇದ್ದಿದ್ದರೆ ಯಾರೂ ಅವರನ್ನು ಮೂಸಿಯೂ ನೋಡುತ್ತಿರಲಿಲ್ಲ ಎಂದು ಸಿಎಂ ಹೇಳಿಕೆಗೆ ಕುಮಾರಸ್ವಾಮಿ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ನಿನ್ನೆ ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಜೆಡಿಎಸ್ ಗೆ ಜನ ಮತ ಹಾಕುವುದಿಲ್ಲ ಎಂಬ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ ಇತರ ಅಧಿಕಾರವನ್ನು ಅನುಭವಿಸಿದ್ದು ಜೆಡಿಎಸ್ ನಿಂದಲೇ ರಾಜಕೀಯವಾಗಿ ಬೆಳದದ್ದರಿಂದ ಕಾಂಗ್ರೆಸ್ ನವರು ಇವರನ್ನು ಕರೆದುಕೊಂಡಿದ್ದು. ಇಲ್ಲದಿದ್ದರೆ ಯಾರು ಇವರನ್ನು ಮೂಸಿಯೂ ನೋಡುತ್ತಿರಲಿಲ್ಲ ಎಂದು ಹೇಳಿದ ಕುಮಾರಸ್ವಾಮಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿಎಂ ಹೇಳಿಕೆಯನ್ನು ಸವಾಲಗಿ ಸ್ವೀಕರಿಸಿದ್ದು ಮುಂದೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದನ್ನು ಜನ ತೀರ್ಮಾನಿಸುತ್ತಾರೆ. ಆದರೆ ಕಾಂಗ್ರೆಸ್ ನ ಕೊನೆಯ ಮುಖ್ಯಮಂತ್ರಿ, ಕಾಂಗ್ರೆಸ್ ಸಮಾಧಿಗೆ ಇವರು ಕೊನೆಯ ಮೊಳೆ ಹೊಡೆಯುವುದು ಖಚಿತ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಐಎಎಸ್ ಅಧಿಕಾರಿ ಡಿ.ಕೆ ರವಿ ಅನುಮಾನಸ್ಪದ ಸಾವಿನ ವರದಿ ಇದೇ ರೀತಿ ಬರುತ್ತದೆ ಎಂದು ಮೊದಲೇ ನನಗೆ ತಿಳಿದಿತ್ತು. ಏಕೆಂದರೆ ಸರ್ಕಾರ ಈ ಪ್ರಕರಣದ ಯಾವುದೇ ಸಾಕ್ಷಿಯನ್ನು ಸಿಬಿಐಗೆ ನೀಡಿರಲಿಲ್ಲ. ಸಿಬಿಐಗೆ ಪ್ರಕರಣವನ್ನು ನೀಡುವ ವೇಳೆಗೆ ಯಾವುದೇ ಸಾಕ್ಷಿ, ಆಧಾರಗಳು ಇರಲಿಲ್ಲ ಎಂದ ಕುಮಾರಸ್ವಾಮಿ, ದೇಶದಲ್ಲಿ ಯಾವುದೇ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಉಳಿದಿಲ್ಲ ಎಂದರು.