ಮೈಸೂರು: ಮಾಜಿ ಸಂಸದ ಹೆಚ್.ವಿಶ್ವನಾಥ್ ಮಾನಸಿಕ ಅಸ್ವಸ್ಥರಾಗಿದ್ದು ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಬೊಗಳುವ ಸಾಂಸ್ಕೃತಿಯನ್ನು ವಿಶ್ವನಾಥ್ ಬೆಳಸಿಕೊಂಡಿದ್ದಾರೆ. ತಮ್ಮ ಘನತೆಗೆ ತಕ್ಕನಾಗಿ ನಡೆದುಕೊಂಡರೆ ಚೆನ್ನಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದ ಮಾಜಿ ಸಂಸದ ವಿಶ್ವನಾಥ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರು ದೈಹಿಕವಾಗಿ ಚಿಕಿತ್ಸೆ ಪಡೆದಿದ್ದಾರೆ ಆದರೆ ಮಾನಸಿಕವಾಗಿಯೂ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದ ಸಂಸದರು ಕಲಬೆರಕೆ ಪೆಟ್ರೋಲ್ ಹಾಗೂ ಹೋಟೆಲ್ ಜಾಗ ಕಬಳಿಸಿ ಸಂಪಾದಿಸಿರುವ ಹಣ ಕಳೆದುಕೊಳ್ಳುವ ಭೀತಿಯಲ್ಲಿ ವಿಶ್ವನಾಥ್ ಹತಾಶ ಹೇಳಿಕೆ ನೀಡುತ್ತಿದ್ದಾರೆ ಎಂದರು.
ದುಬಾರಿ ವಾಚ್ ದರಿಸಿ ಪೇಚಿಗೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ್ ದಿನ್ ಪ್ರತಿಭಟನೆ ಸಲುವಾಗಿ ಕಲಾಪ ಮುಂದೂಡಿದ್ದಾರೆ, ರಾಜ್ಯ ಸರ್ಕಾರದ ಕಲಾಪ ಮುಂದೂಡಿದಕ್ಕೆ ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದ್ದಾರೆ.