ಚಾಮರಾಜನಗರ:`ನಾನು ಸಮುದ್ರದಲ್ಲಿ ಈಜಿ ಬಂದವನು, ನೀನು ಬಾವಿಯಲ್ಲಿ ವಟಗುಟ್ಟುವ ಕಪ್ಪೆ’ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಏಕವಚನದಲ್ಲಿಯೇ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮಂತ್ರಿ ಮಂಡಲದಿಂದ ಕೈಬಿಟ್ಟ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸೆಟೆದು ನಿಂತಿರುವ ಮಾಜಿ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಚಾಮರಾಜನಗರದಲ್ಲಿ ಸ್ವಾಭಿಮಾನ ಸಮಾವೇಶಕ್ಕೆ ಚಾಲನೆ ನೀಡಿ ಸಿಎಂ ವಿರುದ್ಧ ಹರಿಹಾಯ್ದರು.
`ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಡೋಂಗಿ ಸಮಾಜವಾದಿ, ಕರ್ನಾಟಕದ ನಂ.1 ಸುಳ್ಳುಗಾರ ರಾಜಕಾರಣಿ, ನಾನು ಸಮುದ್ರದಲ್ಲಿ ಈಜಿ ಬಂದವನು, ನೀನು ಬಾವಿಯಲ್ಲಿ ವಟಗುಟ್ಟುವ ಕಪ್ಪೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದರು. ಸಿದ್ದರಾಮಯ್ಯನ ಇನ್ನೊಂದು ಮುಖ ಜನರಿಗೆ ಗೊತ್ತಿಲ್ಲ, ನಿನಗೆ ಕಮಿಟ್ ಮೆಂಟ್ ಇಲ್ಲ. ದಲಿತ ರಾಜಕಾರಣವನ್ನು ಧ್ವಂಸ ಮಾಡಲು ಸಿದ್ದರಾಮಯ್ಯ ಹುನ್ನಾರ ಮಾಡುತ್ತಿದ್ದಾನೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದರು.