News Kannada
Monday, January 30 2023

ಮೈಸೂರು

ಮರ ಕಡಿಯದಂತೆ ಸ್ಥಳೀಯರ ಪ್ರತಿಭಟನೆ

Photo Credit :

ಮರ ಕಡಿಯದಂತೆ ಸ್ಥಳೀಯರ ಪ್ರತಿಭಟನೆ

ಮೈಸೂರು: ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಭಿವೃದ್ದಿ ಕೆಲಸದ ನೆಪದಲ್ಲಿ ರಸ್ತೆ ಬದಿಯ ಮರ ಕಡಿಯುತ್ತಿದ್ದ ಗುತ್ತಿಗೆದಾರನ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ಮರವನ್ನು ರಕ್ಷಿಸಿದ ಘಟನೆ ನಗರದ ಟೆರಿಷಿಯನ್ ಕಾಲೇಜು ಬಳಿ ನಡೆದಿದೆ.

ನಗರದ ಬನ್ನೂರ್ ರಸ್ತೆಯಲ್ಲಿರುವ ಟೆರಿಷಿಯನ್ ಕಾಲೇಜು ಬಳಿ ರಾಜಕಾಲುವೆ ನಿರ್ಮಾಣಕ್ಕಾಗಿ ಟೆಂಡರ್ ಪಡೆದ ಗುತ್ತಿಗೆದಾರ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅನಾವ್ಯಶಕವಾಗಿ ಜೆಸಿಬಿ ಯಲ್ಲಿ ದೊಡ್ಡ ಮರವನ್ನು ಕೆಡುವುತ್ತಿದ್ದನ್ನು ಕಂಡ ಸ್ಥಳೀಯ ನಾಗರಿಕರು ತಕ್ಷಣ ಗುತ್ತಿಗೆದಾರರನ್ನು ಪ್ರಶ್ನಿಸಿದಾಗ ಅವರು ಸರಿಯಾಗಿ ಉತ್ತರ ನೀಡದೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ಓಡಿ ಹೋಗಿದ್ದು ಈ ಸಂಬಂಧ ಸ್ಥಳೀಯರು ಅರಣ್ಯ ಇಲಾಖೆಗೆ ಈ ಬಗ್ಗೆ ಸುದ್ದಿ ತಿಳಿಸಿದರೂ ಮೂರ್ನಾಕು ಗಂಟೆಯಾದರೂ ಸ್ಥಳಕ್ಕೆ ಆಗಮಿಸದ ಅರಣ್ಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ದೀಡಿರ್ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಪ್ರತಿಭಟನಕಾರ ರಾಜ ಕಾಲುವೆ ನಿರ್ಮಾಣಕ್ಕೆ ಈ ಮರ ಕಡಿಯುವ ಅವ್ಯಶಕತೆ ಇಲ್ಲ ಏಕೆಂದರೆ ಇದು ರಾಜ ಕಾಲವೆಯಿಂದ ದೂರ ಇದೆ. ಆದರೂ ಗುತ್ತಿಗೆದಾರ ಮರವನ್ನು ಕಡಿಯುತ್ತಿರುವುದರಿಂದ ಪ್ರತಿಭಟನೆ ನಡೆಸಿದ್ದು ಮರ ಕಡಿಯದಂತೆ ತಡೆದಿದ್ದೇವೆ. ಇದೇ ರೀತಿ ಕಳೆದ ವಾರದಿಂದಲೂ ಹತ್ತಕ್ಕೂ ಹೆಚ್ಚು ಮರಗಳನ್ನು ಅನುಮತಿ ಪಡೆಯದೆ ಕಡಿದಿದ್ದು ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಾಹಿಸಿದರು.

See also  ಕೇದಾರನಾಥದಲ್ಲಿ ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯ ಅವರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು