News Kannada
Wednesday, February 08 2023

ಮೈಸೂರು

ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಗಣ್ಯರಿಂದ ಸ್ವಚ್ಛತಾ ಕಾರ್ಯ

Photo Credit :

ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಗಣ್ಯರಿಂದ ಸ್ವಚ್ಛತಾ ಕಾರ್ಯ

ಮೈಸೂರು: ಸ್ವಚ್ಛತಾ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಡಿ. ರಂದೀಪ್, ಎಸ್ಪಿ ರವಿ ಡಿ. ಚನ್ನಣ್ಣನವರ್, ಎಎಸ್ಪಿ ಕಲಾ ಕೃಷ್ಣಮೂರ್ತಿ, ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಆಯುಕ್ತ ಜೆ.ಜಗದೀಶ್ ಮತ್ತು ಇತರರು ಶನಿವಾರದಂದು ಬೆಳಗ್ಗೆ ಜ್ಯೋತಿ ನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಆವರಣವನ್ನು ಸ್ವಚ್ಛಗೊಳಿಸಿದರು.

ತಾವು ವಾಸಿಸುವ ಸ್ಥಳದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಟ್ಟಲ್ಲಿ ತನ್ನಿಂತಾನೆ ನಗರವೂ ಸ್ವಚ್ಛವಾಗುವುದು. ಸಮಾಜವನ್ನು ಸ್ವಚ್ಛವಾಗಿಡಲು ಪೊಲೀಸರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಾರೆ. ಮನೆಯ ಆವರಣವನ್ನು ಸ್ವಚ್ಛವಾಗಿಡುವುದು ಅವರ ಕುಟುಂಬದವರ ಕರ್ತವ್ಯ ಎಂದು ಚನ್ನಣ್ಣನವರ್ ಹೇಳಿದರು.

ಮೈಸೂರು ಸತತ ಎರಡು ಬಾರಿ ದೇಶದಲ್ಲೇ ಸ್ವಚ್ಛ ನಗರಿ ಎಂಬ ಬಿರುದನ್ನು ತೆಗೆದುಕೊಂಡಿದೆ. ಈ ಬಿರುದು ನಮ್ಮಲ್ಲೇ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಈ ತಂಡವು ಬನ್ನೂರು ರಸ್ತೆಯಲ್ಲಿರುವ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿತು. ನಗರದಲ್ಲಿರುವ ಸಾರ್ವಜನಿಕೆ ಶೌಚಾಲಯಗಳಿಗೆ ಭೇಟಿ ನೀಡಿ ಶುಚಿತ್ವ ಮತ್ತು ನೀರಿನ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರಿಶೀಲಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

 

See also  ಮೈಸೂರು ಜೈಲಿನಿಂದ ಸನ್ನಡತೆಯಿಂದ ಬಿಡುಗಡೆಗೊಂಡ ಖೈದಿಗಳು ಹೇಳಿದ್ದೇನು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು