ಮೈಸೂರು: ದುಬೈನಲ್ಲಿ ತಿಂಗಳಿಗೆ 30 ಸಾವಿರ ಸಂಬಳ ಎಂದು ಆಸೆ ತೋರಿಸಿ ಮಹಿಳೆಯನ್ನು ಮಾರಾಟ ಮಾಡುವ ಜಾಲಾ ಮೈಸೂರಿನಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಟ್ರಾವೆಲ್ ಎಜೆಂಟ್ ಯೊಬ್ಬನನ್ನ ಉದಯಗಿರಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ದುಬೈನಲ್ಲಿ ಮನೆ ಕೆಲಸಕ್ಕೆ ತಿಂಗಳಿಗೆ 30 ಸಾವಿರ ಸಂಬಳ ಕೊಡಿಸುತ್ತೇನೆಂದು ಉದಯಗಿರಿಯ ಟ್ರಾವೆಲ್ ಎಜೆಂಟ್ ಅಲ್ಮಾಸ್ ಎಂಬುವವನು ಇಬ್ಬರು ಮಹಿಳೆಯರನ್ನು ದುಬೈಗೆ ಕಳುಹಿಸಲು ನೇರವಾಗಿ ನಾಗಪುರಕ್ಕೆ ಕರೆಸಿಕೊಂಡು ಅಲ್ಲಿಂದ ಇಬ್ಬರು ಮಹಿಳೆಯರನ್ನು ವೇಶಾವಟಿಕೆಗೆ ಬಳಸಲು ಯತ್ನಿಸಿದಾಗ ಒಬ್ಬ ಮಹಿಳೆ ಬಿಬಿ ಆಜಿರಾ ಇದಕ್ಕೆ ಒಪ್ಪದೆ ಇದ್ದಾಗ ಕೊನೆಗೆ ಮನವೊಲಿಸಿ ನಕಲಿ ವಿಸಾ ಮಾಡಿಸಿ ಈಕೆಯನ್ನ ದುಬೈಗೆ ಕಳುಹಿಸಿದ್ದು ಮತ್ತೊಬ್ಬ ಮಹಿಳೆಯನ್ನು ಸಹ ಬೇರೆ ವಿಮಾನದಲ್ಲಿ ದುಬೈಗೆ ಕಳುಹಿಸಿದ್ದಾರೆ.
ದುಬೈನ ವಿಮಾನ ನಿಲ್ದಾಣದಲ್ಲಿ ವಿಸಾ ಪರೀಕ್ಷೆ ಸಂದರ್ಭದಲ್ಲಿ ನಕಲಿ ಎಂದು ಗೊತ್ತಾಗಿ ಜೈಲು ಪಾಲಾಗಿದ್ದು, ಭಾರತೀಯ ರಾಯಾಭಾರಿ ಕಛೇರಿಯ ಸಹಾಯದಿಂದ ನಾಗಪುರಕ್ಕೆ ವಾಪಸ್ ಬಂದು ಅಲ್ಲಿಂದ ಭಿಕ್ಷೆ ಬೇಡಿ ರೈಲಿನಲ್ಲಿ ಮೈಸೂರಿಗೆ ವಾಪಸ್ಸಾಗಿ ಅಲ್ಲಿ ನಡೆದ ಎಲ್ಲಾ ಘಟನೆಗಳನ್ನ ಉದಯಗಿರಿ ಪೊಲೀಸರಿಗೆ ತಿಳಿಸಿ ದುಬೈಗೆ ಕೆಲಸದ ಆಸೆ ತೋರಿಸಿ ಕಳುಹಿಸಿದ ಟ್ರಾವೆಲ್ ಎಜೆಂಟ್ ಅಲ್ಮಾಸ್ ವಿರುದ್ದ ದೂರು ದಾಖಲಿಸಿದ್ದಾಳೆ.
ಮಗಳಿಂದ ದೂರು ದಾಖಲು:
ಬಿಬಿ ಆಜಿರಾ ಜೊತೆ ಹೋಗಿದ್ದ ಮತ್ತೊಬ್ಬ ಗೌಹರ್ ಜಾನ್ (38) ಈಗ ಸೌದಿಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು, ಅವಳನ್ನ ರಕ್ಷಿಸುವಂತೆ ಮಗಳು ನಿನಾಕೌಸರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಮಾನವ ಕಳ್ಳ ಸಾಗಣೆ:
ಮಕ್ಕಳ ಮಾರಾಟ ಜಾಲಾ ಬೆಳಕಿಗೆ ಬಂದ ಬೆನ್ನಲ್ಲೆ ಮೈಸೂರಿನಲ್ಲಿ ಮಾನವ ಕಳ್ಳ ಸಾಗಣೆಕೆ ಜಾಲಾ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಡ ಹೆಣ್ಣು ಮಕ್ಕಳು, ಮಹಿಳೆಯರು ಈ ಜಾಲಾದಲ್ಲಿ ಸಿಲುಕಿಕೊಂಡಿದ್ದು, ಇದಕ್ಕೆ ಸ್ಪಷ್ಟ ನಿದರ್ಶಶನ ಈ ಘಟನೆಯಾಗಿದ್ದು ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕಾಗಿದ್ದು ಈ ಮಾನವ ಕಳ್ಳ ಸಾಗಣಿಕೆಯ ಜಾಲಾದಲ್ಲಿ ಹಲವಾರು ದೊಡ್ಡ ದೊಡ್ಡ ಕೈಗಳಿದ್ದು ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸ್ವಯಂ ಸೇವಾ ಸಂಸ್ಥೆಗಳು ಆಗ್ರಹಿಸಿದೆ.
ಸಂತ್ರಸ್ಥ ಮಹಿಳೆ ಒಡನಾಡಿ ಸಂಸ್ಥೆಯ ನೆರವು ಕೇಳಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಣೆಯ ಅನುಮಾದ ಕೇಸ್ ದಾಖಲಾಗಿದೆ. ಅಲ್ಮಾಸ್ ಸ್ನೇಹಿತರಾದ ಸುಹೆಲ್, ಶಾಕಿಬ್ ಮತ್ತು ಸಮೀನಾ ವಿರುದ್ಧ ಕೂಡ ಕಂಪ್ಲೆಂಟ್ ದಾಖಲಾಗಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.