ಮೈಸೂರು: ಸಮರೋಪಾದಿಯಲ್ಲಿ ನೋಟು ಮುದ್ರಣ ಮಾಡುತ್ತಿರುವ ಮೈಸೂರಿನ ನೋಟು ಮುದ್ರಣ ಘಟಕ್ಕಕೆ ಪ್ರಧಾನ ಮಂತ್ರಿ ಕಾರ್ಯಾಲಯದ ಸೂಚನೆಯ ಮೇರೆಗೆ ಅರೆಸೇನಾ ಪಡೆಯ ಹೆಚ್ಚಿನ ರಕ್ಷಣೆ ಒದಗಿಸಲಾಗಿದೆ.
ದೇಶದಲ್ಲಿ ಹಳೆಯ 500 ಮತ್ತು ಸಾವಿರ ನೋಟುಗಳನ್ನು ದಿಢೀರ್ ರದ್ದು ಮಾಡಿದ್ದರಿಂದ ಉಂಟಾಗಿರುವ ನೋಟುಗಳ ಅಭಾವವನ್ನ ನೀಗಿಸಲು ಮೈಸೂರಿನ ಭಾರತೀಯ ರೆಸರ್ವ್ ಬ್ಯಾಂಕ್ ನ ನೋಟು ಮುದ್ರಣ ಘಟಕದಲ್ಲಿ ಸಮರೋಪಾದಿಯಲ್ಲಿ ಹೊಸ 500 ಹಾಗೂ 2000 ಮುಖಬೆಲೆಯ ನೋಟುಗಳನ್ನು ದಿನದ 24 ಗಂಟೆಯೂ ಮೂರು ಪಾಳಯದಲ್ಲಿ ಮುದ್ರಣ ಮಾಡುತ್ತಿದ್ದು, ಇದಕ್ಕೆ ಕೇಂದ್ರಿಯಾ ಕೈಗಾರಿಕ ಪಡೆಯ ಭದ್ರತೆ ಒದಗಿಸಲಾಗಿದ್ದು ಹೆಚ್ಚಿನ ಭದ್ರತೆಗಾಗಿ ಪ್ರಧಾನ ಮಂತ್ರಿ ಕಾರ್ಯಲಯವೂ 120 ಮಂದಿ ಯೋಧರ ಅರೆಸೇನಾ ಪಡೆಯ ತುಕಡಿಯನ್ನು ಮೈಸೂರು ನೋಟು ಮುದ್ರಣ ಘಟಕಕ್ಕೆ ಭಾನುವಾರು ಕಳುಹಿಸಿದ್ದು ಈ ವಿಚಾರ ಮೈಸೂರಿನ ಆರ್ ಬಿಐ ನೌಕರರಿಗೆ ಗೊತ್ತಿಲ್ಲ ಅಷ್ಟರ ಮಟ್ಟಿಗೆ ಗೌಪ್ಯತೆಯನ್ನು ಕಾಪಾಡಲಾಗಿದೆ.
500 ನೋಟುಗಳ ಮುದ್ರಣ:
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕವೂ ಇಲ್ಲಿಯವರೆಗೆ 2000 ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿತ್ತು. ಆದರೆ ದೇಶದಲ್ಲಿ 2000 ನೋಟ್ ಗಳಿಗೆ ಚಿಲ್ಲರೆ ಸಮಸ್ಯೆಯಿಂದಾಗಿ 500 ನೋಟ್ ಮುದ್ರಣ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲ್ಲೆಯಲ್ಲಿ ನೋಟು ಮುದ್ರಣ ಮಾಡುವ ಕಾಗದವನ್ನುಮೈಸೂರು ಘಟಕದಲ್ಲೇ ಉದ್ಪಾದನೆ ಮಾಡುವುದರಿಂದ ಇಲ್ಲೇ 500 ರೂಪಾಯಿ ಹೊಸ ನೋಟುಗಳನ್ನ ಮುದ್ರಣ ಮಾಡಲು ತೀರ್ಮಾನಿಸಿದ್ದು ಹೊಸ 500 ನೋಟ್ ಗಳು ಮುದ್ರಣ ಭರದಿಂದ ಸಾಗಿದ್ದು ನೌಕರರು ವಾರದ 7 ದಿನವೂ ಕೆಲಸ ನಿರ್ವಹಿಸುತ್ತಿದ್ದು, ಎಲ್ಲರಿಗೂ ರಜೆಯನ್ನು ರದ್ದು ಮಾಡಲಾಗಿದೆ.