ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳು ಚಳಿಯ ತೀವ್ರತಗೆ ತತ್ತರಿಸಿದ್ದು ಕಳೆದ 20 ದಿನಗಳಲ್ಲಿ ಏಳು ಪ್ರಾಣಿಗಳು ಸಾವ್ನಪ್ಪಿದ್ದು ಚಳಿಯ ತೀವ್ರತಗೆ ನಿದರ್ಶನವಾಗಿದೆ.
ಸಾಂಸ್ಕೃತಿಕ ನಗರಿಯ ಜನರು ತೀವ್ರ ಚಳಿಗೆ ಈಗಾಗಲೇ ತತ್ತರಿಸಿದ್ದು ಚಳಿಯ ತೀವ್ರತೆ ಪ್ರಾಣಿಗಳನ್ನು ಬಿಟ್ಟಿಲ್ಲ. ಈಗಾಗಲೇ ಕಳೆದ 20 ದಿನಗಳಿಂದ ಗರ್ಭಿಣಿ ಜೀಬ್ರಾ, ಕಾಳಿಂಗ ಸರ್ಪ, ಕಾಡೆಮ್ಮೆ, ಘೇಂಡಾಮೃಗ, ಹೆಬ್ಬಾವು, ನರಿ ಮತ್ತು ಲ್ಯಾಂಟಾನಾ ಮಂಕಿ (ಸಿಂಗಲೀಕ) ಸಾವಿಗೀಡಾಗಿದ್ದು ಚಳಿಯ ತೀವ್ರತಗೆ ಸಾಕ್ಷಿಯಾಗಿದೆ.
ಈ ಬಗ್ಗೆ ಮೃಗಾಲಯದ ಆರೋಗ್ಯಾಧಿಕಾರಿಗಳು ಎಲ್ಲಾ ಪ್ರಾಣಿಗಳನ್ನು ಪರೀಕ್ಷಿಸುತ್ತಿದ್ದು ಅಗತ್ಯವಾದ ಚಿಕಿತ್ಸಾ ಕ್ರಮವನ್ನು ಕೈಗೊಂಡಿದ್ದಾರೆ.
ಪ್ರಾಣಿಗಳ ಸರಣಿ ಸಾವಿನ ಬಗ್ಗೆ ಮೃಗಾಲಯ ನಿರ್ದೇಶಕಿ ಕಮಲಾ ಕರಿಕಳಾನ್ ವೀರೆಶ್ ಮಾತನಾಡಿ, ಎಲ್ಲಾ ಪ್ರಾಣಿ ಪಕ್ಷಿಗಳನ್ನು ಮೃಗಾಲಯದ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುತ್ತಿದ್ದು ಚಳಿಗಾಲವಾದ್ದರಿಂದ ಕೆಲವು ಪ್ರಾಣಿಗಳು ಆರೋಗ್ಯ ಹದಗೆಟ್ಟು ಸಾವ್ನಪ್ಪಿದ್ದರೆ ಮತ್ತೆ ಕೆಲವು ಪ್ರಾಣಿಗಳು ವಯಾಸ್ಸಾದರಿಂದ ಸಾವ್ನಪ್ಪಿವೆ ಎನ್ನುತ್ತಾರೆ. ಈ ಬಗ್ಗೆ ಸಾರ್ವಜನಿಕರು ಪ್ರವಾಸಿಗರು ಆತಂಕ ಪಡಬೇಕಾಗಿಲ್ಲ ಇದು ಸಹಜ ಪ್ರಕ್ರಿಯೆ ಎಂದರು.