News Kannada
Wednesday, February 01 2023

ಮೈಸೂರು

ಮಕ್ಕಳ ಮಾರಾಟ ಜಾಲಾದ ಬಗ್ಗೆ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ಹೇಳಿದ್ದೇನು?

Photo Credit :

ಮಕ್ಕಳ ಮಾರಾಟ ಜಾಲಾದ ಬಗ್ಗೆ ಎಸ್ಪಿ ರವಿ.ಡಿ.ಚೆನ್ನಣ್ಣನವರ್ ಹೇಳಿದ್ದೇನು?

ಮೈಸೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಕ್ಕಳ ಮಾರಾಟ ಜಾಲಾವನ್ನು ಬೇಧಿಸಿದ್ದು 16 ಮಕ್ಕಳನ್ನು ರಕ್ಷಣೆ ಮಾಡಿ 11 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಎರಡು ಆಸ್ಪತ್ರೆಯ ವಿರುದ್ದ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಮಗು ಕಳೆದುಕೊಂಡ ತಾಯಿಯೊಬ್ಬಳು ನೀಡಿದ ದೂರಿನ ಅನ್ವಯ ಕಾರ್ಯ ಪ್ರವೃತ್ತರಾದ ಪೊಲೀಸ್ ತಂಡ ಮಕ್ಕಳ ಮಾರಾಟ ಜಾಲಾದ ದೊಡ್ಡ ತಂಡವನ್ನೇ ಬೇದಿಸಿದ್ದು ಈ ಸಂಬಂದ 11 ಜನ ಆರೋಪಿಗಳನ್ನು ಬಂಧಿಲಾಗಿದ್ದು ಅದರಲ್ಲಿ ರವಿ, ಅಶೋಕ, ಶಂಕರ ಎಂಬ ಅಪರಾದ ಹಿನ್ನಲೆಯುಳ್ಳ ಆರೋಪಿಗಳನ್ನ ಬಂಧಿಸಿ ಇವರೊಂದಿಗೆ ಇತರ 8 ಜನರನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದ್ದು 16 ಮಕ್ಕಳನ್ನ ರಕ್ಷಣೆ ಮಾಡಲಾಗಿದ್ದು ಉಳಿದ 5 ಮಕ್ಕಳನ್ನ ರಕ್ಷಣೆ ಮಾಡುವ ಕಾರ್ಯ ನಡೆದಿದೆ ಎಂದರು.

ಮುಖ್ಯವಾಗಿ ಮಕ್ಕಳ ಮಾರಾಟ ಜಾಲಾದಿಂದ ಅಮೇರಿಕಕ್ಕೆ ಒಂದು ಮಗು ಸಾಗಣೆಯಾಗಿದ್ದು ಆ ಮಗುವನ್ನ ರಕ್ಷಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ನಾಲ್ಕು ಜನ ಮೂಲ ತಂದೆ ತಾಯಿಗಳು ಪತ್ತೆಯಾಗಿದ್ದು ಅವರ ಡಿಎನ್ ಎ ಪರೀಕ್ಷೆಗೆ ಒಳಪಡಿಸಿದ್ದು ಆ ನಂತರ ಮಗುವನ್ನ ತಂದೆತಾಯಿಗಳಿಗೆ ನೀಡಲಾಗುವುದು ಎಂದರು ಪೊಲೀಸ್ ವರಿಷ್ಟಾಧಿಕಾರಿ ರವಿ.ಡಿ.ಚೆನ್ನಣ್ಣನವರ್.

ಒಂದು ಮಗುವನ್ನ ಒಂದು ಲಕ್ಷದಿಂದ ನಾಲ್ಕು ಲಕ್ಷದವರೆಗೆ ಮಾರಾಟ ಮಾಡಲಾಗುತ್ತಿದ್ದು ಮಕ್ಕಳ ದೈಹಿಕ ಲಕ್ಷಣ ಗಮನಿಸಿ ರೇಟ್ ಫಿಕ್ಸ್ ಮಾಡಲಾಗುತ್ತಿದ್ದು, ಮಗು ಬೇಡ ಎಂದು ಅಭಾಷನ್ ಗೆ ಬರುವ ತಾಯಂದರಿಗೆ ಹಣದ ಆಮಿಷವೊಡ್ಡಿ ಮಗುವನ್ನ ಪಡೆದು ಈ ತಂಡ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿತ್ತು.

ನಿರ್ಗತಿಕರು ಮತ್ತು ಬಿಕ್ಷುಕರ ಮಕ್ಕಳೆ ಇವರ ಟಾರ್ಗೆಟ್:

ಬಿಕ್ಷುಕರು, ನಿರ್ಗತಿಕರು, ಬಡವರ ಮಕ್ಕಳೇ, ಈ ಮಕ್ಕಳ ಮಾರಾಟ ಜಾಲಾದ ಟಾರ್ಗೆಟ್ ಆಗಿದ್ದು ಇವರಿಗೆ ಹಣದ ಆಮಿಷವೊಡ್ಡಲಾಗುತ್ತಿದ್ದು ಅದಕ್ಕೆ ಒಪ್ಪದಿದ್ದಾಗ ಮಗುವನ್ನ ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದರು. ಈ ಜಾಲಾದೊಂದಿಗೆ ನಗರದ ಅರವಿಂದ ಹಾಗೂ ನಸೀಮಾ ಖಾಸಗಿ ಆಸ್ಪತ್ರೆಯು ಭಾಗಿಯಾಗಿದ್ದು ಆಸ್ಪತ್ರೆಯ ಪರವಾನಿಗೆಯನ್ನ ರದ್ದು ಪಡಿಸಿವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಡಿಹೆಚ್ಒ ಅವರೊಂದಿಗೆ ಪತ್ರ ವ್ಯವಹಾರ ನಡೆದಿದ್ದು ಈ ಆಸ್ಪತ್ರೆಗಳಿಗೆ ನೋಟಿಸ್ ಸಹ ಜಾರಿಗೊಳಿಸಿದ್ದಾರೆ.

ಕ್ರಿಮಿನಲ್ ಹಿನ್ನಲೆ:
ಮಕ್ಕಳ ಮಾರಾಟ ಜಾಲದ ಪ್ರಮುಖ ಕಿಂಗ್ ಫಿನ್ ಗಳಾದ ರವಿಚಂದ್ರ, ಅಶೋಕ, ಶಂಕರ್ ಅವರು 2013ರಿಂದ ಮೈಸೂರಿನಲ್ಲಿ ಕುವೆಂಪುನಗರ, ವಿಜಯನಗರ, ಸರಸ್ವತಿಪುರಂ, ನಜರ್ ಬಾದ್, ಉದಯಗಿರಿ, ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಸುಲಿಗೆ ಪಕ್ರರಣ, 8 ಮನೆಗಳ್ಳತನ ಸೇರಿದಂತೆ, 13 ಪ್ರಕರಣಗಳಲ್ಲಿ ಭಾಗಿಯಾಗಿದ್ದು ತನಿಖಾ ವೇಳೆಯಲ್ಲಿ ಗೊತ್ತಾಗಿದ್ದು ಇವರಿಂದ 28 ಲಕ್ಷಮೌಲ್ಯದ ಚಿನ್ನಾಭಾರಣ, ಅರ್ಧ ಕೆ.ಜಿ ಬೆಳ್ಳಿ, 4 ಕಾರು, 3 ಟಿವಿ, 1 ಬೈಕ್, 1 ಲಾಪ್ ಟ್ಯಾಪ್, 4 ಮೊಬೈಲ್, 8 ದುಬಾರಿ ಬೆಲೆಯ ವಾಚ್, 1.5 ಲಕ್ಷ ಹಣ ಸೇರಿದಂತೆ 57 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ವಶ ಪಡಸಿಕೊಳ್ಳಲಾಗಿದೆ. ಈ ಜಾಲಾವನ್ನು ಪತ್ತೆ ಮಾಡಲು ಶ್ರಮಿಸಿದ ಪೊಲೀಸ್ ತಂಡ 1 ಲಕ್ಷ ನಗದು ಬಹುಮಾನ ನೀಡಿಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಪೊಲೀಸ್ ವರಿಷ್ಟಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ತಿಳಿಸಿದರು.

See also  ನಂಜನಗೂಡಿನಲ್ಲಿ ಮೋದಿ ಅಲೆ, ಕಾಂಗ್ರೇಸ್ ನವರ ದರೋಡೆ ಲೂಟಿ ವಿಚಾರವೇ ಪ್ರಮುಖ ಅಸ್ತ್ರ: ಯಡಿಯೂರಪ್ಪ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು