ಮೈಸೂರು: ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹೆಚ್ಐವಿ ಪೀಡಿತ ಮಕ್ಕಳಿಗೆ ನರೇಂದ್ರ ಮೋದಿ ಮುಖವಾಡ ಹಾಕಿಸಿವ ಮೂಲಕ ಮಾಜಿ ಸಚಿವ ರಾಮದಾಸ್ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ.
ಇಂದು ವಿಶ್ವ ಏಡ್ಸ್ ದಿನಾಚರಣೆ, ಪ್ರಚಂಚದ್ಯಾಂತ ಈ ದಿನಾಚರಣೆಯನ್ನ ಆಚರಿಸಿಲಾಗುತ್ತಿದ್ದು ಮೈಸೂರಿನಲ್ಲಿ ಅಮ್ಮ ಸೇವಾ ಸಂಸ್ಥೆಯ ಹೆಚ್.ಐವಿ ಪೀಡಿತ ಮಕ್ಕಳನ್ನ ಚಾಮುಂಡಿ ಬೆಟ್ಟದ ಪಾದದ ಮೂಲಕ ಮೋದಿ ಮುಖವಾಡ ಧರಿಸಿಕೊಂಡು ದೇವಸ್ಥಾನಕ್ಕೆ ಹೋಗಿ ನಾಡ ದೇವಿ ಚಾಮುಂಡಿ ತಾಯಿಗೆ ದೇಶದಲ್ಲಿರುವ ಎಲ್ಲಾ ಹೆಚ್ ಐವಿ ಪೀಡಿತರ ಆರೋಗ್ಯ ವೃದ್ದಿಯಾಗಲಿ ಎಂದು ಪೂಜೆ ಸಲ್ಲಿಸಿದರು.
ಮೋದಿ ಮುಖವಾಡ:
ಹೆಚ್.ಐವಿ ಪೀಡಿತ ಮಕ್ಕಳಿಗೆ ಮಾಜಿ ಸಚಿವ ರಾಮದಾಸ್ ದೇಶದ ಹಲವಾರು ಪ್ರಗತಿ ಪರ ಯೋಜನೆಯ ರೂವಾರಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡಗಳನ್ನು ಮಕ್ಕಳಿಗೆ ಹಾಕಿಸುವ ಮೂಲಕ ರಾಜಕೀಯ ಪ್ರಚಾರ ಪಡೆಯುತ್ತಿದ್ದಾರೆ. ಜೊತೆಗೆ ಪ್ರಧಾನಿ ಅವರಿಗೂ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ಅಸಮಾಧನಾ ವ್ಯಕ್ತ ಪಡಿಸಿದ್ದು, ಪ್ರಧಾನಿ ಮೋದಿಯಂಥ ವ್ಯಕ್ತಿಯನ್ನ ಈ ರೀತಿ ಮುಖವಾಡದ ಮೂಲಕ ಅವಮಾನ ಮಾಡುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.