News Kannada
Monday, January 30 2023

ಮೈಸೂರು

ಶಂಕಿತ ಉಗ್ರನ ವಿಚಾರಣೆಗೆ ಮೈಸೂರಿಗೆ ಕರೆತಂದ ಎನ್ಐಎ ತಂಡ

Photo Credit :

ಶಂಕಿತ ಉಗ್ರನ ವಿಚಾರಣೆಗೆ ಮೈಸೂರಿಗೆ ಕರೆತಂದ ಎನ್ಐಎ ತಂಡ

ಮೈಸೂರು: ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯಾ ತನಿಖಾ ತಂಡವೂ ಪ್ರಕರಣದ ಆರೋಪಿಯನ್ನು ಕರೆತಂದು ಸ್ಥಳ  ಮಹಾಜರು ನಡೆಸಿದ್ದಾರೆ.

ಕಳೆದ ಆಗಸ್ಟ್ 1 ರಂದು ಮೈಸೂರು ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಈ ಹಿನ್ನಲ್ಲೆಯಲ್ಲಿ ತನಿಖೆಯನ್ನು ರಾಷ್ಟ್ರೀಯಾ ತನಿಖಾ ತಂಡ ಎನ್ ಐಎ ವಹಿಸಿಕೊಂಡು ಕಳೆದ ವಾರ ತಮಿಳನಾಡಿನ ಮಧುರೈನಲ್ಲಿ ಮೂರು ಜನ ಶಂಕಿತ ಅಲ್ ಖೈದಾ ಸಂಘಟನೆಯ ಉಗ್ರರರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಎನ್ ಐಎ ತಂಡ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿತ್ತು.

ಶಂಕಿತ ಉಗ್ರರ ಪೈಕಿ ದಾವೂದ್ ಸುಲೈಮಾನ್ ಎಂಬ ಶಂಕಿತ ಉಗ್ರ ಮೈಸೂರಿನ ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ಬಾಂಬ್ ಇಟ್ಟ ಬಗ್ಗೆ ತನಿಖೆಯಲ್ಲಿ ಬಾಯ್ಬಿಟಿದ್ದು ಆತನನ್ನ ಇಂದು ಬೆಳಗ್ಗೆ ಸಹಾಯಕ ಪೊಲೀಸ್ ಆಯುಕ್ತರ ಕಛೇರಿ ಲಕ್ಷ್ಮೀಪುರಂನಲ್ಲಿ ವಿಚಾರಣೆಗೊಳಪಡಿಸಿ ನಂತರ ಆತ ಬಾಂಬ್ ಸ್ಪೋಟದ ದಿನ ಬಸ್ಸಿನಲ್ಲಿ  ಬಂದು ಯಾವ ಯಾವ ಕಡೆ ಓಡಾಡಿದ್ದ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಎನ್ ಐಎ ತಂಡ ನಂತರ ಸ್ಪೋಟ ನಡೆದ ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯಕ್ಕೆ ಕರೆ ತಂದು ಸ್ಥಳ ಮಹಜರು ಮಾಡಲಾಯಿತು.

ಶಂಕಿತ ಉಗ್ರ ದಾವೂದ್ ಸುಲೈಮಾನ್ ಚೆನೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಈತ ಮೈಸೂರಿನ ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯದಲ್ಲಿ ನಾನೊಬ್ಬನೇ ಬಂದು ಬಾಂಬ್ ಇಟ್ಟಿರುವುದಾಗಿ ತನಿಖೆ ವೇಳೆಯಲ್ಲಿ ಒಪ್ಪಿಕೊಂಡಿದ್ದು, ಇದಲ್ಲದೆ  ಚಿತ್ತೂರು, ನೆಲ್ಲೂರು, ಕೊಲ್ಲಂ ಮತ್ತು ಮಲ್ಲಾಪುರಂಗಳಲ್ಲಿ ನಡೆದ ಸ್ಫೋಟ ಪ್ರಕರಣದಲ್ಲೂ ಈತ ಭಾಗಿಯಾಗಿರುವ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಮಾಹಿತಿ ಸಂಗ್ರಹಣೆ:
ಬಂಧಿತ ಶಂಕಿತ ಉಗ್ರನ ಚಹರೆಯನ್ನು ಮೈಸೂರು ನ್ಯಾಯಾಲಯದ ಆವರಣದ ಶೌಚಾಲಯವನ್ನ ಸ್ವಚ್ಚ ಮಾಡುವ  ಮಹಿಳೆ ಹಾಗೂ ಇತರ ಸಿಬ್ಬಂದಿಗಳಿಂದ ಸಹಾಯಕ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ವಿಚಾರಣೆ ಮಾಡಿ ಈತನ ಚಹರೆಯನ್ನ ಗುರುತಿಸಲಾಗಿದೆ. ಅಲ್ಲದೆ ಈತ ಮೈಸೂರಿನ ವಿದ್ಯಾರಣ್ಯಪುರಂ ಪ್ರದೇಶದಲ್ಲಿ ಕೆಲವು  ವ್ಯಕ್ತಿಗಳನ್ನ ಬೇಟಿ ಮಾಡಿದ್ದು ಹಾಗೂ ಆತ ಒಡಾಟ ನಡೆಸಿದ ಸ್ಥಳಗಳನ್ನೂ ಎನ್ಐಎ ತಂಡ ಸ್ಥಳೀಯ ಪೊಲೀಸರ ನೆರವಿನಿಂದ ಗುಪ್ತವಾಗಿ ತನಿಖೆ ನಡೆಸುತ್ತಿದೆ.

See also  ಸಮಾಜದಲ್ಲಿ ಸಮಾನತೆ ಮೂಡಿಸುವಲ್ಲಿ ಅಂಬಿಗರ ಚೌಡಯ್ಯ ಪಾತ್ರ ಪ್ರಮುಖ: ಡಾ.ಕಾಳೇಗೌಡ ನಾಗವಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು