ಮೈಸೂರು: ಸಾಧನೆ ಮಾಡಿದ ಪೊಲೀಸರಿಗೆ ಬಹುಮಾನ ಚೆಕ್ ರೂಪದಲ್ಲಿ ನೀಡುವ ಮೂಲಕ ನಗದು ರಹಿತ ವ್ಯವಹಾರ ಅಳವಡಿಸಿಕೊಂಡ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ರವಿ ಡಿ ಚೆನ್ನಣ್ಣನವರ್ ಪಾತ್ರರಾಗಿದ್ದಾರೆ.
ಪ್ರತಿ ತಿಂಗಳು ಜಿಲ್ಲೆಯ ಪೊಲೀಸ್ ಠಾಣೆಯ ಒಬ್ಬ ಪೊಲೀಸರಿಗೆ ತನಿಖೆ ಮತ್ತು ಅಪರಾಧದಲ್ಲಿ ಉತ್ತಮ ಸಾಧನೆ ಮಾಡಿದ ಪೊಲೀಸನಿಗೆ ನಗದು ಬಹುಮಾನ ಹಾಗೂ ಪ್ರಶಂಸ ಪತ್ರ ಕೊಡುವ ಹೊಸ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ಕಳೆದ ಮೂರು ತಿಂಗಳಿನಿಂದ ಜಾರಿಗೆ ತಂದರು.
ಈ ದೇಶ ಪ್ರಧಾನಿ ಮೋದಿ ಅವರ ನಗದು ರಹಿತ ಡಿಜಿಟಲ್ ವ್ಯವಹಾರದ ಕಡೆ ಹೋಗುತ್ತಿರುವ ಸಂಧರ್ಭದಲ್ಲಿ ಹಳೆಯ 500 ಮತ್ತು ಸಾವಿರ ನೋಟ್ ಗಳನ್ನು ರದ್ದು ಮಾಡಿದ್ದು ಯಾರಿಗೂ ಹಳೆಯ ನೋಟುಗಳು ಬೇಡವಾಗಿದ್ದು ಹೊಸ ನೋಟುಗಳು ಸಿಗುತ್ತಿಲ್ಲ. ಈ ಹಿನ್ನಲ್ಲೆಯಲ್ಲಿ ಸಾಧನೆ ಮಾಡಿದ ಪೊಲೀಸರಿಗೆ ಎಸ್ಪಿ 5000 ನಗದು ಬಹುಮಾನವನ್ನು ಚೆಕ್ ಮೂಲಕ ನೀಡುವ ಮೂಲಕ ಮೊದಲ ಬಾರಿಗೆ ಇಲಾಖೆಯಲ್ಲಿ ನಗದು ರಹಿತ ವ್ಯವಹಾರವನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.