ಮೈಸೂರು: ಐಟಿ ದಾಳಿಯಲ್ಲಿ ಸಿಕ್ಕಿಬಿದ್ದು ಅಮಾನತಾಗಿರುವ ಇಬ್ಬರು ಅಧಿಕಾರಿಗಳಿಗೆ ಮೈಸೂರಿನ ಮೂರು ಬ್ಯಾಂಕ್ ಗಳಿಂದ ಹೊಸ ನೋಟುಗಳು ಸರಬರಾಜಾಗಿದ್ದು ಬ್ಯಾಂಕ್ ಅಧಿಕಾರಿಗಳಿಗೆ ನಡುಕ ಉಂಟಾಗಿದೆ.
ಸಿಎಂ ಪರಮಾಪ್ತ ಅಧಿಕಾರಿ ಚಿಕ್ಕರಾಯಪ್ಪ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರ ಆಪ್ತ ಅಧಿಕಾರಿ ಜಯಚಂದ್ರ ಮನೆಯ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಅವರ ಮನೆಯಲ್ಲಿ 4 ಕೋಟಿ 70 ಲಕ್ಷ 2000 ಸಾವಿರ ಮುಖಬೆಲೆಯ ಹೊಸ ನೋಟುಗಳು ಪತ್ತೆಯಾಗಿದ್ದು, ಈ ನೋಟ್ ಗಳು ತಮಿಳುನಾಡು ಸೇರಿದಂತೆ ಬೇರೆ ಬೇರೆ ಬ್ಯಾಂಕ್ ಗಳಿಂದ ಗುತ್ತಿಗೆದಾರರ ಮೂಲಕ ಹೊಸ ನೋಟುಗಳನ್ನ ಬದಲಾವಣೆ ಮಾಡಲಾಗಿತ್ತು.
ಸಿಎಂ ಪರಮಾಪ್ತ ಚಿಕ್ಕರಾಯಪ್ಪ ಮೈಸೂರಿನ ಸಿಎಂ ಆಪ್ತರ ಮೂಲಕ ಹಾಗೂ ಗುತ್ತಿಗೆದಾರರ ಮೂಲಕ ಮೂರು ಬ್ಯಾಂಕ್ ಗಳಿಂದ ಹೊಸ ನೋಟುಗಳನ್ನ ಪಡೆಯಲಾಗಿದ್ದು ಈಗ ಬ್ಯಾಂಕ್ ಅಧಿಕಾರಿಗಳಿಗೆ ನಡುಕ ಉಂಟಾಗಿದೆ. ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಆಪ್ತ ಜಯಚಂದ್ರ ಮನೆಯಲ್ಲಿ ದೊರೆತ ಹೊಸ 2 ಸಾವಿರ ಮುಖಬೆಲೆಯ ನೋಟುಗಳು ಮೈಸೂರಿನ ಐಒಬಿ, ಎಸ್ ಬಿಎಂ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಬದಲಾವಣೆ ಮಾಡಿರುವ ಹಣ ಎನ್ನಲಾಗಿದ್ದು ಈ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಟಿ.ನರಸೀಪುರದ ಸಚಿವರ ಪರಮಾಪ್ತರ ಮೂಲಕ ಸುಮಾರು 20 ಕೋಟಿ ಹಳೆಯ ಸಾವಿರ ಮತ್ತು 500 ಮುಖಬೆಲೆಯ ನೋಟುಗಳನ್ನ ಹೊಸ ನೋಟಗಳಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದು ಈ ಬಗ್ಗೆ ಮಾಹಿತಿಯನ್ನ ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನಲಾಗಿದೆ.