ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ಮಕ್ಕಳ ಮಾರಾಟ ಪ್ರಕರಣದ ಕೇಂದ್ರಬಿಂದುವಾಗಿದ್ದ ನಸೀಮಾ ಆಸ್ಪತ್ರೆಗೆ ಮೈಸೂರು ಪೊಲೀಸರು ಬೀಗಮುದ್ರೆ ಹಾಕಿದ್ದಾರೆ.
ಇನ್ನೂ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಂದು ಅರವಿಂದ ಆಸ್ಪತ್ರೆಗೆ ಕೂಡ ನೋಟಿಸ್ ನೀಡಿಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಈವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, 16 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಅಂತ ಹೇಳಿದ್ದಾರೆ. ಪ್ರಕರಣದಲ್ಲಿ ಇನ್ನೂ 2 ಮಕ್ಕಳನ್ನು ರಕ್ಷಣೆ ಮಾಡುವ ಅಗತ್ಯವಿದ್ದು, ಕಿಂಗ್ಪಿನ್ ಉಷಾ ಸಹೋದರಿ ಸಿರಿನ್ ಯುಎಸ್ಎ ನಲ್ಲಿ ಒಂದು ಮಗುವನ್ನು ಇಟ್ಟುಕೊಂಡಿದ್ದು, ಮತ್ತೊಂದು ಮಗು ಮೈಸೂರಿನಲ್ಲಿ ಉಳಿದುಕೊಂಡಿದೆ. ಈ ಎರಡೂ ಮಕ್ಕಳನ್ನು ಆದಷ್ಟು ಬೇಗ ತರಿಸಲಾಗುವುದು ಎಂದರು.