ಮೈಸೂರು: ಜಯಲಲಿತಾ ಶೀಘ್ರ ಚೇತರಿಯಾಗಲಿ ಎಂದು ಚೆನೈನ ಜಯ ಅಭಿಮಾನಿಗಳು ಜಯ ಮನೆದೇವರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
ಜಯಲಲಿತಾ ಮನೆದೇವರು ಚಾಮುಂಡಿ ತಾಯಿಗೆ ಜಯ ಆರೋಗ್ಯ ಚೇತರಿಕೆ ಆಗಲಿ ಎಂದು ಅಮ್ಮನ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬಂದು ಪುಷ್ಪಾರ್ಚನೆ, ಕುಂಕುಮಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಇಡುಗಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ.
ತಮಿಳುನಾಡಿನ ಚೆನೈನ ಆರ್.ಕೆ ನಗರದ ಸುಜಾತ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿಯೇ ಚೆನೈನಿಂದ ಹೊರಟು ಇಂದು ಬೆಳ್ಳಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದರು.
ಕೆಲವು ದಿನಗಳ ಹಿಂದೆ ಜಯ ಅಭಿಮಾನಿಗಳು ಚಾಮುಂಡಿ ಬೆಟ್ಟದಲ್ಲಿರುವ ಅಂಜನೇಯ, ಗಣಪತಿ ವಿಗ್ರಹಗಳಿಗೆ ಚಿನ್ನ ಹಾಗೂ ಬೆಳ್ಳಿಯ ಮುಖವಾಡ ಹರಕೆ ತೀರಿಸಿದ್ದು ಅಮ್ಮ ಆರೋಗ್ಯಕ್ಕೆ ಪ್ರಾರ್ಥನೆ ಸಲ್ಲಿಸಿದರು.