ಮೈಸೂರು: ಜಯಲಲಿತಾ ಹೃದಯಘಾತದಿಂದ ಉಂಟಾಗಿರುವ ಸೂಕ್ಷ್ಮಪರಿಸ್ಥಿತಿಯ ಹಿನ್ನಲ್ಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮೈಸೂರಿನಿಂದ ತಮಿಳುನಾಡಿಗೆ ಹೊರಡುವ 109 ಬಸ್ ಗಳನ್ನು ತಾತ್ಕಲಿಕವಾಗಿ ರದ್ದು ಪಡಿಸಲಾಗಿದ್ದು ಎಂದು ಸಂಚಾರಿ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಮೈಸೂರಿನಿಂದ ತಮಿಳುನಾಡಿನ ವಿವಿಧ ಭಾಗಕ್ಕೆ ಪ್ರತಿದಿನ ಸಾಮಾನ್ಯ ಸಾರಿಗೆ, ರಾಜಹಂಸ, ಐರಾವತ, ಮಲ್ಟಿಆಕ್ಷಲ್ ಸೇರಿದಂತೆ 109 ಬಸ್ಸುಗಳು ಹೊರಡಲಿದ್ದು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಹೃದಯಘಾತದ ಹಿನ್ನಲ್ಲೆಯಲ್ಲಿ ತಮಿಳುನಾಡಿನಲ್ಲಿ ಸೂಕ್ಷ್ಮ ಪರಿಸ್ಥಿತಿ ಉಂಟಾಗಿದ್ದು, ಈ ಹಿನ್ನಲ್ಲೆಯಲ್ಲಿ ಇಂದು ಬೆಳಗ್ಗೆಯಿಂದಲ್ಲೇ ಎಲ್ಲಾ ಬಸ್ ಗಳನ್ನ ರದ್ದು ಪಡಿಸಲಾಗಿದ್ದು ತಮಿಳುನಾಡಿನ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಸಂಚಾರಿ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ಮೈಸೂರಿನಲ್ಲೇ ನಿಂತ ತಮಿಳುನಾಡು ಬಸ್ಸುಗಳು:
ಪ್ರತಿದಿನ ತಮಿಳುನಾಡಿನ ವಿವಿಧ ಭಾಗಗಳಿಂದ 39 ಬಸ್ಸುಗಳು ಮೈಸೂರಿಗೆ ಆಗಮಿಸುತ್ತದೆ. ಆದರೆ ನಿನ್ನೆ ತಮಿಳುನಾಡಿನಲ್ಲಿ ಜಯಲಲಿತಾ ಅವರಿಗೆ ಹೃದಯಘಾತದ ಸುದ್ದಿಯಿಂದ ಉಂಟಾದ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಧಿಕಾರಿಗಳ ಸೂಚನೆಯ ಹಿನ್ನಲೆಯಲ್ಲಿ ಮೈಸೂರು ಬಸ್ಸ್ ನಿಲ್ದಾಣದಲ್ಲಿ ತಮಿಳುನಾಡು ಬಸ್ಸುಗಳು ನಿಂತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.