ಮೈಸೂರು: ನನ್ನ ತಂಗಿ ಜಯಲಲಿತಾ ಬೇಗ ಗುಣಮುಖಳಾಗಲಿ ಎಂದು ದೇವರಿಗೆ ನಿನ್ನೆಯಿಂದ ಪೂಜೆ ಸಲ್ಲಿಸುತ್ತಿದ್ದೇನೆ ಎಂದು ಜಯಲಲಿತಾ ಅಣ್ಣ ವಾಸುದೇವ ಸ್ವಗೃಹದಲ್ಲಿ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರದಲ್ಲಿ ವಾಸವಿರುವ ಜಯಲಲಿತಾ ಅವರ ತಂದೆಯ ಹಿರಿಯ ಹೆಂಡತಿಯ ಮಗ ವಾಸುದೇವನ್ ತಮ್ಮ ಸ್ವಗ್ರಾಮದಲ್ಲಿ ಟಿವಿಯ ಮುಂದೆ ಜಯಲಲಿತಾ ಆರೋಗ್ಯದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆದು ಜಯಲಲಿತಾ ಅವರ ಆರೋಗ್ಯ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ನಿನ್ನೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ.
ಈ ಬಗ್ಗೆ ಮಾದ್ಯಮದವರ ಜೊತೆ ಮಾತನಾಡಿದ ವಾಸುದೇವನ್ ಕುಟುಂಬಕ್ಕೆ ಏನೂ ಮಾಡಿಲ್ಲ ಆದರೂ ತಮಿಳನಾಡಿನ ಜನಕ್ಕೆ ಎಲ್ಲಾ ರೀತಿಯ ಸಹಾಯ ಮಾಡಿ ಅಮ್ಮ ಎಂದು ಖ್ಯಾತಿ ಪಡೆದಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಂಗಿ ಜಯಲಲಿತಾ ಅವರನ್ನ ನೋಡಲು ಹೋದರೆ ನನ್ನನ್ನು ಭದ್ರತಾ ಸಿಬ್ಬಂದಿ ಹತ್ತಿರಕ್ಕೂ ಬಿಡುವುದಿಲ್ಲ ಆದರಿಂದ ನಾನು ಹೋಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಯಾರು ಈ ವಾಸುದೇವನ್?
ಜಯಲಲಿತಾ ತಂದೆ ಜಯರಾಂ ಅವರಿಗೆ ಇಬ್ಬರು ಹೆಂಡತಿಯರು ಮೊದಲ ಹೆಂಡತಿಯ ಮಗನೇ ಈ ವಾಸುದೇವನ್. ಎರಡನೇ ಹೆಂಡತಿಯ ಸಂಧ್ಯಾ ಅವರ ಮಗಳೇ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ. ಈಕೆ ಸಿನಿಮಾ ರಂಗಕ್ಕೆ ಕಾಲಿಟ್ಟು ನಂತರ ತಮಿಳು ನಾಡಿನ ರಾಜಕೀಯದಲ್ಲಿ ಸೇರಿದಳು. ಆ ಸಂಧರ್ಭದಲ್ಲಿ ಜಯಲಲಿತಾ ವಾಸು ದೇವನ್ ಅವರನ್ನ ಎಂಜಿಆರ್ ಗೆ ಪರಿಚಯ ಮಾಡಿಸಲು ಪ್ರಯತ್ನಿಸಿದಾಗ ಕೋಪಗೊಂಡು ಮೈಸೂರಿಗೆ ಬಂದು ಅಲ್ಲಿಂದ ಟಿ.ನರಸೀಪುರದ ಬಳಿಯ ಶ್ರೀರಂಗರಾಜಪುರದಲ್ಲಿ ವಾಸವಿದ್ದು 2009ರಲ್ಲಿ ಹೆಂಡತಿ ತೀರಿ ಕೊಂಡಿದ್ದು ನಂತರ ಮಗನನ್ನು ಕಳೆದುಕೊಂಡ ವಾಸುದೇವನ್ ತನಗಿದ್ದ ಜಮೀನನ್ನು ಎಲ್ಲವನ್ನು ಮಾಡಿಕೊಂಡು ಈಗ 80ನೇ ವರ್ಷದಲ್ಲಿ ಸಣ್ಣ ಮನೆಯಲ್ಲಿ ವಾಸವಿದ್ದಾರೆ.