ಮೈಸೂರು: ಕೆಲಸ ಕೊಡಿಸುವುದಾಗಿ ಇಬ್ಬರು ಯುವಕರಿಗೆ ವಂಚಿಸಿರುವ ಮೈಸೂರು ವಿವಿಯ ನೌಕರರಿಬ್ಬರ ವಿರುದ್ದ ಕೆ.ಆರ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.
ವಂಚಕರು ಮಹೇಶ್ ಹಾಗೂ ಎಸ್ ಡಿಎ ಗುರುಲಿಂಗು
ಶ್ರೀಧರ್ ಹಾಗೂ ಗಿರೀಶ್ ಮೋಸ ಹೋದ ಯುವಕರು. ಇವರು ಮೈಸೂರು ವಿಶ್ವವಿದ್ಯಾನಿಲಯದ ಟೈಪಿಸ್ಟ್ ಮಹೇಶ್ ಹಾಗೂ ಎಸ್ ಡಿಎ ಗುರುಲಿಂಗು ಅವರು ನಿಮಗೆ ಮಂಗಳೂರು ವಿವಿಯಲ್ಲಿ ಎಸ್ ಡಿಸಿಗೆ ಸಮಾನದ ಕೆಲಸ ಕೊಡಿಸುವುದಾಗಿ ಮೂರು ಮೂರು ಲಕ್ಷ ಪಡೆದು ವಂಚಿಸಿದ್ದು ಯುವಕರು ಇವರಿಬ್ಬರ ವಿರುದ್ದ ಕೆ.ಆರ್ ಠಾಣೆಯಲ್ಲಿ ವಂಚನ ದಾಖಲಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಯಲದ ಕುಲಪತಿಯವರು ನಮ್ಮೂರಿನವರು ನಮಗೆ ಪರಿಚಯವಿದೆ. ನಿಮಗೆ 15 ಸಾವಿರ ಸಂಬಳ ಬರುವ ಖಾಯಂ ಕೆಲಸ ಕೊಡಿಸುತ್ತೇನೆ ಎಂದು ಇಬ್ಬರು ವಿದ್ಯಾರ್ಥಿಗಳಿಂದ ಮೂರು ಮೂರು ಲಕ್ಷ ಹಣ ಪಡೆದಿದ್ದು, ಆದರೆ ಮಂಗಳೂರು ವಿವಿಯಿಂದ ಯುವಕರಿಬ್ಬರಿಗೆ ಆರು ತಿಂಗಳ ಕಾಲ ತಾತ್ಕಾಲಿಕ ಕೆಲಸಕ್ಕೆ ಬನ್ನಿ ಎಂದು ಒಂದು ಪತ್ರ ಬಂದಿದ್ದು, ಇದರಿಂದ ಕಂಗಲಾದ ವಿದ್ಯಾರ್ಥಿಗಳು ಮೈಸೂರು ವಿವಿಯ ನೌಕರರಿಬ್ಬರಿಗೆ ತಮ್ಮ ಹಣ ವಾಪಸ್ಸ್ ನೀಡುವಂತೆ ಪಟ್ಟು ಹಿಡಿದರು.
ಆದರೆ ಹಣ ನೀಡಲು ಸತಾಯಿಸುತ್ತಿದ್ದ ಮಹೇಶ ಹಾಗೂ ಗುರುಲಿಂಗು ವಿರುದ್ದ ಮೈಸೂರಿನ ಕೆ.ಆರ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದು ಇವರಿಬ್ಬರ ವಿರುದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.