ಮೈಸೂರು: ವಿಶ್ವವಿಖ್ಯಾತ ಮೈಸೂರು ವಿಶ್ವವಿದ್ಯಾನಿಲಯವು ಇಂದು ತನ್ನ 97ನೇ ಘಟಿಕೋತ್ಸವವನ್ನು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿತ್ತು.
ಕರ್ನಾಟಕದ ರಾಜ್ಯಪಾಲ ವಜುಬಾಯಿರೂಡಾಬಾಯಿವಾಲರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳಿಗಾಗಿ ಶತತ ಹೋರಾಟ ನಡೆಸುತ್ತಿರುವ ಟಿಬೇಟಿಯನ್ ಜನರ ಧರ್ಮಗುರು ದಲೈಲಾಮ ಹಾಗೂ ಮೈಸೂರು ರಾಜಮನೆತನದ ರಾಜಮಾತೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯಪಾಲರು ಪ್ರಶಸ್ತಿ ಪ್ರಧಾನ ಮಾಡಿ ಇಬ್ಬರಿಗೂ ಶಾಲುಹೊದಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಉಪಕುಲಪತಿ ಕೆ.ಎಸ್. ರಂಗಪ್ಪ, ರಿಜಿಸ್ಟ್ರಾರ್ ಪ್ರೊ.ಸಿ.ರಾಜಣ್ಣ, ಸೇರಿದಂತೆ ವಿ.ವಿ.ಯ ಸಿಂಡಿಕೇಟ್ ಸದ್ಯರುಗಳು ಹಾಜರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರಗಳಲ್ಲಿ, ವಿವಿಧ ವಿಷಯಗಳ ವಾಸಂಗದಲ್ಲಿ ಉನ್ನತ ಸ್ತಾನಗಳಿಸಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರುಗಳಿಗೆ ವಿವಿಧ ಪಧವಿಗಳ ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದ ದಲೈಲಾಮಾ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯವು ನನ್ನನ್ನು ಗುರ್ತಿಸಿ ಡಾಕ್ಟರೇಟ್ ಪ್ರಶಸ್ತಿ ನೀಡಿದಕ್ಕೆ ಹೆಮ್ಮೆ ಅನಿಸುತ್ತಿದೆ, ಇನ್ನುಮುಂದೆ ನನ್ನನ್ನು ಡಾ. ದಲೈಲಾಮಾ ಎಂದು ಕರೆಯುವಂತೆ ಮಾಡಿದ ಈ ವಿ.ವಿ.ಗೆ, ಕರ್ನಾಟಕ ಹಾಗೂ ಭಾರತ ಸಕಾರಕ್ಕೆ ನಾವು ಮತ್ತು ನಮ್ಮ ಜನಾಂಗ ಚಿರಋಣಿಯಾಗಿರುತ್ತೇವೆ, ಇಂಡಿಯಾ ದೇಶ ನಮಗೆ ಬದುಕಲು ಜಾಗನೀಡಿ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದೆ. ಆದ್ದರಿಂದ ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇವೆ, ಸದಾ ಕಾಲ ಸ್ಮರಿಸುತ್ತೇವೆ ಎಂದು ಹೇಳಿ ಮೈ.ವಿ.ವಿಗೆ ಕೃತಜ್ಞತೆ ಸಲ್ಲಿಸಿದರು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾತನಾಡಿ ನನಗೆ ಈರೀತಿಯ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಗುತ್ತದೆ ಎಂದು ನಿರಿಕ್ಷೆ ಮಾಡಿರಲಿಲ್ಲ, ಮಹಾರಾಜರೇ ಸ್ಥಾಪಿಸಿದ ಈ ವಿಶ್ವವಿದ್ಯಾನಿಲಯದಲ್ಲಿ ರಾಜವಂಶಸ್ತರಿಗೆ ಡಾಕ್ಟರೇಟ್ ಗೌರವ ದೊರೆತ್ತಿರುವುದು ಹೆಮ್ಮೆಯ ಸಂಗತಿ, ಈ ಪ್ರಶಸ್ತಿ ಯನ್ನು ನಮ್ಮ ರಾಜ ಮನೆತನದ ಪೂವರ್ಿಜರಿಗೆ ಸಲ್ಲುತ್ತದೆ ಎಂದರು ಭಾವೋದ್ವೇಕರಾಗಿ ನುಡಿದರು. ದಲೈಲಾಮಾಗೆ ಪ್ರಶಸ್ತಿ ಲಭಿಸಿದ್ದರಿಂದ ಜಿಲ್ಲೆಯ ಬೈಲುಕುಪ್ಪೆ ಮುಂತಾದ ಕಡೆಗಳಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ ಪ್ರಜೆಗಳು ವಿವಿ ಮುಂದೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.