ಮೈಸೂರು: ಶೈಕ್ಷಣಿಕ ಪ್ರವಾಸಕ್ಕೆ ಮೈಸೂರಿಗೆ ಬಂದಿದ್ದ ಬಸ್ ಮೇಲೆ ಮರ ಬಿದ್ದು ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ನಗರದ ನಂಜರಾಜ್ ಬಹೂದ್ದರ್ ಛತ್ರದ ಮುಂಬಾಗದಲ್ಲಿ ನಡೆದಿದೆ.
ನಿನ್ನೆ ವಾರ್ಧ ಸೈಕ್ಲೋನ್ ಪರಿಣಾಮ ಮೈಸೂರಿನಲ್ಲಿ ದಿನವಿಡೀ ಮಳೆ ಬಿದ್ದು ಜನಜೀವನ ಅಸ್ತವ್ಯಸ್ತವಾಗಿತ್ತು. ಈ ನಡುವೆ ಹಾವೇರಿ ಜಿಲ್ಲೆಯ ಹಳೆರಿತ್ತಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಮೈಸೂರಿಗೆ ಬಂದು ನಂಜರಾಜ ಬಹೂದ್ದರ್ ಛತ್ರದಲ್ಲಿ ರಾತ್ರಿ ತಂಗಿದ್ದ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಊರಿಗೆ ಹೊರಡಲು ಬಸ್ ಹತ್ತುವ ವೇಳೆ ಮರವೊಂದು ಬಿದ್ದು ವಿದ್ಯಾರ್ಥಿ ಗಾಯಗೊಂಡಿದ್ದು ಕೂಡಲೇ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮೇಯರ್ ರವಿ ಕುಮಾರ್ ಬಂದು ವಿದ್ಯಾರ್ಥಿಗಳನ್ನ ಆರೋಗ್ಯ ವಿಚಾರಿಸಿ ತಕ್ಷಣ ಮರವನ್ನ ತೆರವುಗೊಳಿಸಲು ಸೂಚಿಸಿದರು. ನಿನ್ನೆ ದಿನವೀಡಿ ವಾರ್ಧ ಆರ್ಭಟದಿಂದ ಮೈಸೂರು ಇಂದು ಮೋಡ ಮುಸುಕಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ.