News Kannada
Monday, November 28 2022

ಮೈಸೂರು

ತಾಯಿ ಮಗಳನ್ನ ಕೊಂದು ಬಾವಿಗೆಸದ ಪೂಜಾರಿ ಪ್ರಿಯಕರ - 1 min read

Photo Credit :

ತಾಯಿ ಮಗಳನ್ನ ಕೊಂದು ಬಾವಿಗೆಸದ ಪೂಜಾರಿ ಪ್ರಿಯಕರ

ಮೈಸೂರು: ಅಕ್ರಮ ಸಂಬಂಧದ ಹಿನ್ನಲ್ಲೆಯಲ್ಲಿ ಪ್ರಿಯಕರ ತಾಯಿ ಮಗಳನ್ನೆ ಕೊಂದು ಬಾವಿಗೆಸೆದೆರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಉತ್ತನಹಳ್ಳಿ ತೋಟದ ಮನೆಯಲ್ಲಿ ನಡೆದಿದೆ.


ತಾಯಿ ಸವಿತಾ, ಮಗಳು ಕೀರ್ತನಾ(13) ಮೃತಪಟ್ಟಿರುವರು. ಉತ್ತನಹಳ್ಳಿಯ ಶನಿದೇವರ ಪೂಜಾರಿ ಮಹೇಶ ಎಂಬಾತನೇ ಹತ್ಯೆಗೈದಿರುವ ಆರೋಪಿಯಾಗಿದ್ದು ಈತ ಸವಿತಾ ಅವಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಈಕೆಯನ್ನ ಕಿಳ್ಳಂಪುರಕ್ಕೆ ಕೊಟ್ಟು ಕಳೆದ 20 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆದರೆ ಪೂಜಾರಿ ಮಹೇಶ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನಲ್ಲದೆ ಆಕೆಯಿಂದ ಚಿನ್ನ ಹಾಗೂ ಹಣವನ್ನ ಸಾಲವಾಗಿ ಪಡೆದಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಸಹ ನಡೆದಿತ್ತು.

ಕಳೆದ 11 ರಂದು ಈಕೆಯನ್ನ ಕಿಳ್ಳಂಪುರದಿಂದ ಚಿನ್ನ ಮತ್ತು ಹಣ ಕೊಡುವುದಾಗಿ ಕರೆಸಿಕೊಂಡು ಆಕೆಯೊಂದಿಗೆ 12 ರಂದು ಮೈಸೂರ ನಗರವನ್ನೆಲ್ಲ ಸುತ್ತಾಡಿ 12 ರ ರಾತ್ರಿ ತಾಯಿ ಮಗಳನ್ನ ಉತ್ತನಹಳ್ಳಿಯಲ್ಲಿರುವ ತೋಟದ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಗಲಾಟೆ ನಡೆದು ಸಿಟ್ಟಿಗೆದ್ದ ಪೂಜಾರಿ ತಾಯಿ ಮಗಳನ್ನ ಹೊಡೆದು ಪಕ್ಕದಲ್ಲಿದ್ದ ಬಾವಿಗೆ ಎಸೆದು ಊರಿಗೆ ಬಂದಿದ್ದಾನೆ. ನಿನ್ನೆ ಬಾವಿಯಲ್ಲಿ ಶವವನ್ನ ಕಂಡ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಮದ್ಯೆ ಇವರಿಬ್ಬರನ್ನ ಪೂಜಾರಿಯೇ ಕೊಂದಿದ್ದಾನೆ ಎಂದು ರೊಚಿಗೆದ್ದ ಗ್ರಾಮಸ್ಥರು ಈತನನ್ನ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮಧ್ಯೆ ಅವಮಾನ ತಳಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಈತನನ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

See also  ರಾಜ್ಯಗಳ ವಿಂಗಡನೆ ವಿಷಯದಲ್ಲಿ ಸಚಿವ ಮಾಧುಸ್ವಾಮಿ ಮಾತಿಗೆ ಆಕ್ಷೇಪಿಸಿದ ತೇಜಸ್ವಿ ಸೂರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು