ಮೈಸೂರು: ಶ್ರೀ ವೈಷ್ಣವ ಬ್ರಾಹ್ಮಣ ಧರ್ಮದ ಪ್ರಕಾರ ಜಯಲಲಿತಾ ದೇಹ ಪಂಚಭೂತಗಳಲ್ಲಿ ಲೀನಾವಾಗಿಲ್ಲ ಎಂಬ ಕಾರಣಕ್ಕೆಮೈಸೂರಿನ ಸನಾತನಿ ಧರ್ಮ ಸಮಿತಿ 10 ದಿನದ ದರ್ಭೇ ಸಂಸ್ಕಾರವನ್ನು ನೆರವೇರಿಸಿದರು.
ಮಂಗಳವಾರ ಶ್ರೀರಂಗಪಟ್ಟಣದ ಪಟ್ಟಣದ ಕಾವೇರಿ ತೀರದ ಪಶ್ಚಿಮವಾಹಿನಿಯಲ್ಲಿ ಜಯಲಲಿತಾ ನಿಧನರಾಗಿ 9 ದಿನದ ಕಾರ್ಯವನ್ನು ಅವರ ತಮ್ಮ ಎಂದು ಹೇಳುವ ವರದರಾಜು ಪಿಂಡ ಪ್ರಧಾನ ಮಾಡುವ ಮೂಲಕ ನೆರವೇರಿಸಿದರು. ಇಂದು ಮೈಸೂರಿನ ಶ್ರೀ ವೈಷ್ಣವ ಬ್ರಾಹ್ಮಣ ಸಂಸ್ಕಾರ ನೆರವೇರಿಸುವ ಸನಾತನಿ ಧರ್ಮ ಸಮಿತಿಯ ಆಶ್ರಯದಲ್ಲಿ 10 ನೇ ದಿನದ ಕಾರ್ಯವನ್ನು ನೆರವೇರಿಸಿದರು.
ಜಯಲಲಿತಾ ಹೃದಯಘಾತದಿಂದ ನಿಧನರಾದ ನಂತರ ಅವರ ದೇಹ ಅಂತ್ಯಕ್ರಿಯೆ ವೈಷ್ಣವ ಧರ್ಮದ ಅನುಸಾರ ನಡೆದಿಲ್ಲ , ಜೊತೆಗೆ ದೇಹ ಪಂಚಭೂತಗಳಲ್ಲಿ ಲೀನಾವಾಗಿಲ್ಲ ಎಂಬ ಕಾರಣಕ್ಕಾಗಿ ಮೂರು ಜನ ಪೂರೋಹಿತರು ದರ್ಭೆ ಸಂಸ್ಕಾರ ನೇರವೇರಿಸಿದರು.
ಪೂಜೆ ಏನೇನು?
ನಿನ್ನೆ ಕಾವೇರಿ ನದಿಯ ಪಶ್ಚಿಮವಾಹಿನಿಯಲ್ಲಿ ಪಿಂಡ ಪ್ರಧಾನ ನೇರವೇರಿಸಿ 68 ದರ್ಭೆ ಸಂಸ್ಕಾರವನ್ನ ಊರ ಹೊರಗೆ ನೆರವೇರಿಸಿದ್ದು ಇಂದು 10ನೇ ದಿನದ ಕಾರ್ಯದಲ್ಲಿ ಜಯಲಲಿತಾ ಶೀಲಾ ಸ್ಥಾಪನೆ ಮಾಡಿ, ಮೊದಕ, ಪ್ರಿಮೊದಕ, ಸ್ಥಾಯಿ, ನೇತ್ರ, ಪೂಜೆ ಮಾಡಿ ಅಂತನ್ ಮೋಹಕ ಶಾಂತಿ ಹೋಮ, ನೆರವೇರಿಸಿ ಪಿಂಡ ಪ್ರಧಾನ, ಪ್ರಮೋದ ಬಲಿಯನ್ನ ನೀಡುವ ಮೂಲಕ ದರ್ಭೇ ಸಂಸ್ಕಾರವನ್ನ ನೆರವೇರಿಸಲಾಯಿತು.
ನಾಳೆ 11ನೇ ದಿನದ ಕಾರ್ಯ ಇಲ್ಲೇ ನಡೆಯಲಿದ್ದು 11 ಮತ್ತು 13 ದಿನದ ಕಾರ್ಯ ಶ್ರೀರಂಗ ಪಟ್ಟಣದ ಕಾವೇರಿ ನದಿ ತೀರದ ಪಶ್ಚಿಮವಾಹಿನಿಯಲ್ಲಿ ನಡೆಯಲಿದೆ ಎಂದು ದರ್ಭೆ ಸಂಸ್ಕಾರ ನೇತೃತ್ವ ವಹಿಸಿರುವ ರಂಗನಾಥ ಐಯ್ಯಾಂಗರ ತಿಳಿಸಿದರು.
ವಾಸುದೇವನ್ ಪತ್ರ:
ಜಯಲಲಿತಾ ತಂದೆಯ ಹಿರಿಯ ಹೆಂಡತಿ ಮಗ ವಾಸುದೇವನ್ (82). ನನ್ನ ತಂಗಿ ಜಯಲಲಿತಾ ಅವಿವಾಹಿತೆಯಾಗಿದ್ದು ಅವಳ ಅಂತ್ಯೆ ಸಂಸ್ಕಾರ ತವರು ಮನೆಯವರೇ ಮಾಡಬೇಕು. ನನಗೆ ವಯಸ್ಸಾಗಿದ್ದರಿಂದ ಚಿಕ್ಕಮ್ಮನ ಮಗ ವರದರಾಜ್ ಮಾಡ ಬೇಕೆಂದು ಪತ್ರ ಬರೆದಿದ್ದು ಇದರಿಂದ ನಾನೇ ಈ ಕಾರ್ಯವನ್ನ ಮಾಡುತ್ತಿದ್ದೇನೆ ಜಯಲಲಿತಾ ನನಗೂ ಅಕ್ಕ ಆಗಬೇಕು ಎನ್ನುತ್ತಾನೆ ವರದರಾಜನ್.