ಮೈಸೂರು: ಆರ್ ಎಸ್ ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಕೊಲೆ ಆರೋಪಿಗಳನ್ನು ಇಂದು ಮೈಸೂರಿನ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಲಾಯಿತು.
ಮಾರ್ಚ್ 9 ರಂದು ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಸ್ಥಳೀಯ ಮುಖಂಡ ಕ್ಯಾತಮಾರನಹಳ್ಳಿ ರಾಜು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳನ್ನು 5 ತಿಂಗಳ ನಂತರ ಆಗಸ್ಟ್ 20 ರಂದು ಅಭಿದ್ ಫಾಷಾ ಹಾಗೂ ಆತನ ತಂಡವನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನ ವಿಚಾರಣೆಗಾಗಿ ಇಂದು ಮೈಸೂರಿನ ನಾಲ್ಕನೇ ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು 2017 ಜನವರಿ ತಿಂಗಳಿಗೆ ಮುಂದೂಡಿದರು. ಆರೋಪಿಗಳ ವಿಚಾರಣೆಗೆ ಆಗಮಿಸುವ ಹಿನ್ನಲ್ಲೆಯಲ್ಲಿ ಕೋರ್ಟ್ ನ ಸುತ್ತಮುತ್ತ ಬಿಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು.