News Kannada
Monday, January 30 2023

ಮೈಸೂರು

ಜೆಡಿಎಸ್ ನಗರಾಧ್ಯಕ್ಷ-ಬ್ಲಾಕ್ ಅಧ್ಯಕ್ಷರ ಅಧಿಕಾರ ಸ್ವೀಕಾರ

Photo Credit :

ಜೆಡಿಎಸ್ ನಗರಾಧ್ಯಕ್ಷ-ಬ್ಲಾಕ್ ಅಧ್ಯಕ್ಷರ ಅಧಿಕಾರ ಸ್ವೀಕಾರ

ಮೈಸೂರು: ಜೆಡಿಎಸ್ ನಗರಾಧ್ಯಕ್ಷ ಹಾಗೂ ಆರು ಬ್ಲಾಕ್ ಗಳ ಅಧ್ಯಕ್ಷರು ಶುಕ್ರವಾರ ಮೈಸೂರಿನ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಶಾಸಕ ಸಾರಾ ಮಹೇಶ್, ಮೇಯರ್ ರವಿಕುಮಾರ್ ಸಮ್ಮುಖದಲ್ಲಿ  ಅಧಿಕಾರವನ್ನು ಸ್ವೀಕರಿಸಿದರು.  ಜೆಡಿಎಸ್ ನಗರಾಧ್ಯಕ್ಷರಾಗಿ ಕೆ.ಹರೀಶ್ ಗೌಡ, ಕೃಷ್ಣರಾಜ ಬ್ಲಾಕ್ ನ ಅಧ್ಯಕ್ಷರಾಗಿ ಆರ್.ಎ.ರಾಧಾಕೃಷ್ಣ, ನಜೀರ್ ಸಾಬ್ ಬ್ಲಾಕ್ ನ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್, ಚಾಮರಾಜ ಬ್ಲಾಕ್ ನ ಅಧ್ಯಕ್ಷರಾಗಿ ಆರ್.ಎಲ್.ಅನಂತನಾರಾಯಣ, ನರಸಿಂಹರಾಜ ಬ್ಲಾಕ್ ನ ಅಧ್ಯಕ್ಷರಾಗಿ ಎಂ.ಎನ್.ರಾಮು, ಬಂಗಾರಪ್ಪ ಬ್ಲಾಕ್ ನ ಅಧ್ಯಕ್ಷರಾಗಿ ಸಂತೋಷ್, ಶಾಂತವೇರಿ ಗೋಪಾಲಗೌಡ ಬ್ಲಾಕ್ ನ ಅಧ್ಯಕ್ಷರಾಗಿ ಶ್ರೀನಿವಾಸ್ ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಮಾಜಿ ಮೇಯರ್ ಸಂದೇಶ್ ಸ್ವಾಮಿ ಸೇರಿದಂತೆ ಜೆಡಿಎಸ್ ನ ಪಾಲಿಕೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

 

 

See also  ಮೈಸೂರು ವಿಶ್ವವಿದ್ಯಾಲಯದಿಂದ 10 ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು