ಮೈಸೂರು: ದಿಡ್ಡಹಳ್ಳಿ ಆದಿವಾಸಿಗಳ ಬೆತ್ತಲೆ ಪತ್ರಿಭಟನೆಗೆ ನೋಟ್ ಬ್ಯಾನ್ ಆಗಿರುವುದೇ ಕಾರಣ ಎಂದು ಆಶ್ಚರ್ಯಕರ ಹೇಳಿಕೆಯನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳುವ ಅಚ್ಚರಿ ಮೂಡಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಡಿಡ್ಡಹಳ್ಳಿ ಆದಿವಾಸಿಗಳ ಬೆತ್ತಲೆ ಪ್ರತಿಭಟನೆಯ ಬಗ್ಗೆ ತನಿಖೆ ನಡೆಸಿ ನೈಜ್ಯ ವರದಿ ನೀಡುವಂತೆ ಐಜಿ, ಎಸ್ಪಿ ಅವರಿಗೆ ತಿಳಿಸಿದ್ದು ವರದಿ ಬಂದ ನಂತರ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದ ಸಚಿವರು ಎಲ್ಲಾಕ್ಕಿಂತ ಮುಖ್ಯವಾಗಿ ದಿಡ್ಡಹಳ್ಳಿ ಆದಿವಾಸಿಗಳ ಹೋರಾಟಕ್ಕೆ ನೋಟ್ ಬ್ಯಾನ್ ಆಗಿರುವುದೇ ಕಾರಣ. ಏಕೆಂದರೆ ಕೊಡಗಿನ ಕಾಫೀ ತೋಟದಲ್ಲಿ ಮಾಲೀಕರಿಗೆ ಕೂಲಿ ಕೊಡಲು ಹಣ ಸಿಗುತ್ತಿಲ್ಲ, ಇದರಿಂದ ಕೂಲಿ ಕಾರ್ಮಿಕರಿಗೆ ಕೂಲಿ ಸಿಗುತ್ತಿಲ್ಲ, ಕಾಫೀ ಎಸ್ಟೇಟ್ ಮಾಲೀಕರು ಕೂಲಿ ಕಾರ್ಮಿಕರು ಹಾಗೂ ಆದಿ ವಾಸಿಗಳನ್ನು ವಕ್ಕಲೇಬಿಸುತ್ತಿದ್ದಾರೆ ಇದರಿಂದ ಕೆಲಸವಿಲ್ಲದೆ ಆದಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವಾದವನ್ನು ಮಂಡಿಸಿದ ಗೃಹ ಸಚಿವರು ಎಲ್ಲರನ್ನು ಆಶ್ಚರ್ಯ ಉಂಟುಮಾಡುವಂತೆ ಮಾಡಿದ್ದಾರೆ.
ಇನ್ನೂ ಸಂಸದರು ಪಿ.ಚಿದಬರಂ ಕಾಫೀ ಎಸ್ಟೇಟ್ ಸುತ್ತಮುತ್ತ ಅಕ್ರಮ ಒತ್ತುವರಿ ಮಾಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಪರಮೇಶ್ವರ ಚಿದಬರಂ ಸಹಿತ ಯಾರೇ ಆಗಲಿ ಕಾನೂನು ಬಾಹಿರ ಒತ್ತುವರಿ ಮಾಡಿದರೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸುತ್ತಾರೆ, ಅದಕ್ಕೂ ಇದಕ್ಕೂ ತಾಳೆ ಹಾಕುವುದು ಸರಿಯಲ್ಲ ಎಂದರು.
ವಿಶ್ವನಾಥ್ ಪರಮೇಶ್ವರ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಎಲ್ಲರೂ ಇದನ್ನೇ ಹೇಳುತ್ತಿದ್ದಾರೆ ವಿಶ್ವನಾಥ್ ಅವರ ಅಭಿಪ್ರಾಯವನ್ನ ಹೇಳಿದ್ದಾರೆ ಅದನ್ನ ಸ್ವಾಗತಿಸುತ್ತೇನೆ ಎಂದರು, ಇನ್ನೂ ಡಿವೈಎಸ್ಪಿ ಅನುಪಮ ಶೈಣೈ ರಾಜೀನಾಮೆ, ಮೇಟಿ ಪ್ರಕರಣಕ್ಕೂ ಯಾವುದೇ ಸಂಬಂದವಿಲ್ಲ ಅನುಪಮ ಶೈಣೈ ರಾಜೀನಾಮೆ ನೀಡಿದ್ದಾರೆ ಮೇಟಿಯೂ ಸಹ ರಾಜೀನಾಮೆ ನೀಡಿದ್ದಾರೆ ಇಬ್ಬರದು ಮುಗಿದ ಅಧ್ಯಾಯ ಎಂದ ಸಚಿವರು ಸಿಬಿಐ ಹಣಕಾಸು ವಿಚಾರದಲ್ಲಿ ಆರ್ ಬಿಐ ಮಾರ್ಗಸೂಚಿಯ ಅನುಸಾರ ರಾಜ್ಯ ಸರ್ಕಾರದ ಅನುಮತಿ ಪಡೆಯದೆ ದಾಳಿ ನಡೆಸಿ ತನಿಖೆ ಮಾಡಲು ಅವಕಾಶವಿದೆ ಎಂದರು.