ಮೈಸೂರು: ಟಾಟಾ ಹಾಗೂ ಪಿ.ಚಿದಬರಂ ಎಸ್ಟೇಟ್ ಮಾಲೀಕರು ಸಾವಿರಾರು ಎಕರೆ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನ ಸಿದ್ದರಾಮಯ್ಯನವರು ತೆರವುಗೊಳಿಸಿದರೆ ಆದಿವಾಸಿಗಳಿಗೆ ಪುನರ್ವಸತಿ ಜೊತೆಗೆ ಎರಡು ಎರಡು ಎಕರೆ ಕಾಫೀ ತೋಟ ನೋಡಬಹುದೆಂದು ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ ಹಾಕಿದ್ದಾರೆ.
ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಟಾಟಾ ಹಾಗೂ ಪಿ.ಚಿದಬರಂ ಎಸ್ಟೇಟ್ ಮಾಲೀಕರು ಕೊಡಗಿನಲ್ಲಿ ಸಾವಿರಾರು ಎಕರೆ ಕಾಡನ್ನ ಒತ್ತುವರಿ ಮಾಡಿಕೊಂಡಿದ್ದು ಇದನ್ನ ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿ ಆದಿವಾಸಿಗಳಿಗೆ ಮನೆ ಕಟ್ಟಿಸಿ ಜೊತೆಗೆ ಎರಡು ಎಕರೆ ಕಾಫೀ ತೋಟವನ್ನು ನೀಡಬಹುದು ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು. ಪಿ.ಚಿದಬರಂ ಯಾರು ಎಂಬುದು ಸಿಎಂ ಹಾಗೂ ಕಾಗೋಡು ಗೊತ್ತಿದೆ. ರಾಜ್ಯದಲ್ಲಿ ಅಧಿಕಾರ ಇದೆ ಈ ಬಗ್ಗೆ ಗಮನ ಹರಿಸಬೇಕೆಂದು ಟೀಕಿಸಿದ ಪ್ರತಾಪ್ ಸಿಂಹ ದೊಡ್ಡ ವ್ಯಕ್ತಿಗಳ ಒತ್ತುವರಿನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.