ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಯಿಂದ ವಿ. ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಖಚಿತ ಹಾಗೂ ಎರಡು ಮೂರು ದಿನಗಳಲ್ಲಿ ರಾಜ್ಯದ ಮೂವರು ಸಚಿವರು ಸಿಕ್ಕಿ ಬೀಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೈಸೂರಿನಲ್ಲಿ ಗುಡುಗಿದ್ದಾರೆ.
ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಖಚಿತವಾಗಿದ್ದು ಜೊತೆಗೆ ಡಾ.ಹೆಚ್.ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ನೂರಕ್ಕೆ ನೂರರಷ್ಟು ಸ್ಪರ್ಧೆ ಮಾಡುವುದಿಲ್ಲ ಏಕೆ ಎಂಬುದು ಶೀಘ್ರದಲ್ಲೇ ಗೊತ್ತಾಗುತ್ತದೆ. ಇನ್ನೂ ರಾಜ್ಯದ ಎರಡು ಮೂರು ಸಚಿವರು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯ ಸಿಕ್ಕಿ ಬೀಳುತ್ತಾರೆ ನಾನು ಶಾಸ್ತ್ರ ಹೇಳುವುದಿಲ್ಲ ಎರಡು ಮೂರು ದಿನ ಕಾಯಿರಿ ಎಂದಷ್ಟೇ ಹೇಳಿದ ಯಡಿಯೂರಪ್ಪ ಸಿದ್ದರಾಮಯ್ಯ ಬುಡಕ್ಕೂ ಬರುತ್ತದೆ. ಇದಕ್ಕೆ ಯಾವುದೇ ದಾಖಲೆಗಳು ಬೇಕಿಲ್ಲ ಕಾದು ನೋಡಿ ಎಂದಷ್ಟೇ ಹೇಳಿದರು.
ದಿಡಳ್ಳಿ ಆದಿವಾಸಿಗಳ ಒಕ್ಕಲೆಬ್ಬಿಸಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುದಿಲ್ಲ ಇಂದು ಮಧ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದ ಯಡಿಯೂರಪ್ಪ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಾಮಾಣಿಕ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಂಸತ್ ನಲ್ಲಿ ಮಾತನಾಡಿದರೆ ಭೂಕಂಪವೇ ಆಗುತ್ತದೆ. ಸ್ಪಲ್ಪ ದಿನ ಕಾಯಿರಿ ರಾಹುಲ್ ಗಾಂಧಿ ಮನೆಯಲ್ಲಿ ಭೂಕಂಪವಾಗುತ್ತದೆ ಎಂದು ಲೇವಡಿ ಮಾಡಿದ ಬಿಎಸ್ ವೈ ಬೆಳಗಾವಿ ಸಮಾವೇಶದಲ್ಲಿ ಚಪ್ಪಾಳೆಗಾಗಿ ಏನೂ ಮಾತನಾಡಿದರೂ ಚಪ್ಪಾಳೆ ಸಿಗಲಿಲ್ಲ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಿನಾಯವಾಗಿ ಸೋಲು ಅನುಭವಿಸುತ್ತದೆ ಎಂದು ಹೇಳಿದರು.