ಮೈಸೂರು: ಸರ್ಕಾರದಿಂದ ನೀಟ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕೊಡಿ ಎಂದು ಪತ್ರ ಬರೆದಿದ್ದು ಅವಕಾಶ ಕೊಟ್ಟಿಲ್ಲ. ಆದ್ದರಿಂದ ಮತ್ತೊಂದು ಬಾರಿ ಕೇಂದ್ರಕ್ಕೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಕನ್ನಡವೂ ಸಹ ಎಲ್ಲಾ ಭಾಷೆಗಳಂತೆ ರಾಷ್ಟ್ರೀಯ ಭಾಷೆಯಾಗಿದ್ದು, ಕನ್ನಡ ಕ್ಕೆ ಅವಕಾಶ ಕೊಡದ ಬಗ್ಗೆ ನಮ್ಮ ರಾಜ್ಯದ ಸಂಸದರು ಹಾಗೂ ಕೇಂದ್ರದ ಸಚಿವರು ಧ್ವನಿ ಎತ್ತಬೇಕು ಇವರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ವಾಗ್ದಾಳಿ ನಡೆಸಿದ ಸಿಎಂ ಇಬ್ಬರು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಸದ್ಯದಲ್ಲೇ ಸಿಕ್ಕಿಬೀಳ್ತಾರೆಂದು ಹೇಳಲು ಯಡಿಯೂರಪ್ಪ ಐಟಿ ಇಲಾಖೆಯ ಏಜೆಂಟರೇ. ಜವಾಬ್ದಾರಿಯುತ ಮಾಜಿ ಸಿಎಂ ಆಗಿ ಬೇಜವಾಬ್ದಾರಿ ಹೇಳಿಕೆ ಕೊಡಬಾರದು, ಯಾವ ಆಧಾರದ ಮೇಲೆ ಹಾಗೆ ಆರೋಪ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಜೆಡಿಎಸ್-ಬಿಜೆಪಿ ಇಬ್ಬರೂ ಅಧಿಕಾರಕ್ಕೆ ಬಂದಿದ್ದೇವೆಂದು ವರ್ತಿಸುತ್ತಿದ್ದಾರೆ. ಜೆಡಿ ಎಸ್ ಬಗ್ಗೆ ನಾನು ಹೇಳಿರೋದು ಸತ್ಯ. ನಾವೆಲ್ಲಾ ಪಕ್ಷದಲ್ಲಿದ್ದಾಗಲೇ ಅಧಿಕಾರಕ್ಕೆ ಬರಲಾಗಲಿಲ್ಲ. ಜನ ಆಶೀರ್ವಾದ ಮಾಡಬೇಕು. ಇವರೆಲ್ಲ ಏನೇ ಮಾಡಿದರೂ ಮುಂದಿನ ಬಾರಿಯೂ ರಾಜ್ಯ ದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರೋದು ಖಚಿತ.
ಇನ್ನೂ ನಂಜನಗೂಡು ಉಪಚುನಾವಣೆ ಪ್ರಕಟವಾಗಿಲ್ಲ, ದಿನಾಂಕ ಪ್ರಕಟವಾದ ನಂತರ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತದೆ, ಇನ್ನೂ ನಂಜನಗೂಡಿನಲ್ಲಿ ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ ಆದ್ದರಿಂದ ಶ್ರೀನಿವಾಸ್ ಪ್ರಸಾದ್ ಹಿಂದೆ ಬದ್ದಿದ್ದಾರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಮೂರು ಬಾರಿ ಮೇಜು ಕುಟ್ಟಿ ಖಚಿತ ಪಡಿಸಿದ ಸಿಎಂ ಸಿದ್ದರಾಮಯ್ಯ ಆದಿವಾಸಿಗಳ ಸಮಸ್ಯೆ ಗಳ ಬಗ್ಗೆ ಪರಿಹಾರ ನೀಡಲು ಸಮಾಜ ಕಲ್ಯಾಣ ಸಚಿವ ಅಂಜನೇಯ ಹಾಗೂ ಕಾರ್ಯದರ್ಶಿಯನ್ನ ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದ್ದು ಶೀಘ್ರವೇ ಪುನರ್ವಸತಿ ಕಲ್ಪಸಿಲಾಗುವುದು ಎಂದ ಸಿಎಂ ರಂಗಾಯಣ ಕಲಾವಿದರ ಸಮಸ್ಯೆಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಜೊತೆ ಚರ್ಚಿಸುವೆ ಎಂದರು.