ಮೈಸೂರು: ದೇವು ಹತ್ಯೆಯ ಪ್ರತೀಕಾರವಾಗಿ ಹಾಡು ಹಗಲೇ ವ್ಯಕ್ತಿಯನ್ನ ಕೊಲೆ ಮಾಡಿರುವ ಘಟನೆ ನಗರದ ಒಂಟಿಕೊಪ್ಪಲಿನ 6ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಕೃಷ್ಣ(37). ಈತ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು ಜೊಡಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸಿ.ಮಹದೇಶ ಅವರ ನಿಕಟವರ್ತಿಯಾಗಿದ್ದು ಮೇ 5ರಂದು ಹತ್ಯೆಯಾಗಿದ್ದ ದೇವು ಹತ್ಯೆಯ ಹಿನ್ನಲ್ಲೆಯಲ್ಲಿ ಈತನ ಪಾತ್ರವು ಇತ್ತು ಎಂಬ ಸಂಶಯದ ಹಿನ್ನಲ್ಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸ್ ಸಂಶಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಶೈಲಿಯಲ್ಲಿ ಕೃತ್ಯ:
ಬೆಳಗ್ಗೆ 10.30 ಸಂದರ್ಭದಲ್ಲಿ ಟೀ ಕುಡಿದು ತನ್ನ ಹೋಂಡಾ ಆಕ್ಟೀವಾ ಬೈಕ್ ನಲ್ಲಿ ಮನೆ ಕಡೆ ಹೊರಟು ಬರುವಾಗ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಬೈಕನ್ನು ಕಾರಿನಿಂದ ಗುದ್ದಿ ಬೀಳಿಸಿ ಕೆಳಗೆ ಬಿದ್ದ ಕೃಷ್ಣ ಮಾರಾಕಸ್ತ್ರಗಳಿಂದ ತಲೆಯಿಂದ ಕೊಚ್ಚಿ ಸಿನಿಮಿಯಾ ಶೈಲಿಯಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಶೇಖರ್ ಆಗಮಿಸಿ ಪರಿಶೀಲನೆ ನಡೆಸಿ ಶವ ಗಾರಕ್ಕೆ ನಗರ ಪೊಲೀಸ್ ಕಮಿಷನರ್ ಸುಬ್ರಮಣ್ಯಶ್ವೇರಾ ರಾವ್ ಭೇಟಿ ನೀಡಿ ಮಾಹಿತಿ ಪಡೆದಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡ ಬಲೆ ಬೀಸಿದ್ದಾರೆ.