News Kannada
Tuesday, September 27 2022

ಮೈಸೂರು

ಮೈಸೂರಿನ ನಂದನ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ - 1 min read

Photo Credit :

ಮೈಸೂರಿನ ನಂದನ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ

ಮೈಸೂರು: ಇತ್ತೀಚೆಗೆ ಪಶ್ಚಿಮ ಬಂಗಾಳದ ಕೂಚ್‌ಬೆಹರ್ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ’ಎಕ್ಸ್‌ಪೋಷರ್-೨೦೧೬’ ಹೆಸರಿನ ’ಐದನೇ ಅಂತರಾಷ್ಟ್ರೀಯ ಸೆಲೋನ್ ಆಫ್ ಪ್ರೊಜೆಕ್ಟಡ್ ಇಮೇಜಸ್’ ಎಂಬ ಅಂತರಾಷ್ಟ್ರೀಯ ಛಾಯಾಗ್ರಹಣ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ನಂದನ್ ಎ. ನಾರಾಯಣ್ ಅವರಿಗೆ ಎರಡು ವಿಭಾಗಗಳಲ್ಲಿ ಚಿನ್ನದ ಪದಕ ಲಭಿಸಿದೆ.

ವಿವಿಧ ರಾಷ್ಟ್ರಗಳ ನೂರಾರು ಛಾಯಾಗ್ರಾಹಕರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನಂದನ್ ಅವರ ’ಎಲಿಫೆಂಟ್ ಅಟ್ಯಾಕ್’ ಮತ್ತು ’ ಲೆಪರ್ಡ್ ಇನ್ ಸಿಟಿ’ ಎಂಬ ಎರಡು ಪ್ರತ್ಯೇಕ ಛಾಯಾಚಿತ್ರಗಳಿಗೆ ಎರಡು ಪ್ರತ್ಯೇಕ ಚಿನ್ನದ ಪದಕ ಒಲಿದಿದೆ.

’ಎಲಿಫೆಂಟ್ ಅಟ್ಯಾಕ್’ ಛಾಯಾಚಿತ್ರಕ್ಕೆ ’ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೇರಿಕಾ’ ಸಂಸ್ಥೆಯ(ಪಿಎಸ್‌ಎ ಗೋಲ್ಡ್) ಚಿನ್ನದ ಪದಕ ಲಭಿಸಿದ್ದರೆ, ’ಲೆಪರ್ಡ್ ಇನ್ ಸಿಟಿ’ ಛಾಯಾಚಿತ್ರಕ್ಕೆ ’ಫೆಡರೇಷನ್ ಇನ್ ಆರ್ಟ್ ಆಫ್ ಫೋಟೋಗ್ರಫಿ’ ಸಂಸ್ಥೆಯ ಚಿನ್ನದ ಪದಕ ಪಡೆದುಕೊಂಡಿದೆ.

ಸ್ಪರ್ಧೆಯಲ್ಲಿ ಇಂಡಿಯಾ, ಕೆನಡಾ, ಹಾಂಗ್‌ಕಾಂಗ್, ಯುಎಸ್‌ಎ, ತೈವಾನ್, ಐರ್‍ಲೆಂಡ್, ನೆದರ್‌ಲ್ಯಾಂಡ್, ಫಿನ್‌ಲ್ಯಾಂಡ್, ಕತಾರ್, ರಷ್ಯಾ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಯುಕೆ, ಇಟಲಿ, ಫ್ರಾನ್ಸ್, ಡೆನ್ಮಾರ್ಕ್, ಪೋರ್ಚುಗಲ್ ಸೇರಿದಂತೆ ಇನ್ನಿತರೆ ದೇಶಗಳ ಖ್ಯಾತ ಛಾಯಾಗ್ರಾಹಕರು ಭಾಗವಹಿಸಿದ್ದರು.

See also  ಯುವತಿ ನಾಪತ್ತೆ ಪ್ರಕರಣ: ಯುವಕನ ಮನೆ ಮೇಲೆ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು