News Kannada
Tuesday, November 29 2022

ಮೈಸೂರು

ಮೈಸೂರಲ್ಲಿ ವರ್ಷಾಚರಣೆಯ ಹುಚ್ಚಾಟಕ್ಕೆ ಬ್ರೇಕ್! - 1 min read

Photo Credit :

ಮೈಸೂರಲ್ಲಿ ವರ್ಷಾಚರಣೆಯ ಹುಚ್ಚಾಟಕ್ಕೆ ಬ್ರೇಕ್!

ಮೈಸೂರು: ಮೈಸೂರಿನಲ್ಲಿ ಹೊಸವರ್ಷಾಚರಣೆಯನ್ನು ಶಾಂತಿಯುತವಾಗಿ ಆಚರಿಸಲು ಸೂಚನೆ ನೀಡಿರುವ  ಮೈಸೂರು ನಗರ ಪೊಲೀಸ್ ಕಮೀಷ್ ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್  ಅವರು ವರ್ಷಾಚರಣೆಯ ನೆಪದಲ್ಲಿ ಮೋಜು ಮಸ್ತಿ ಮಾಡುತ್ತಾ ಸಾರ್ವಜನಿಕರಿಗೆ ಕಿರುಕುಳ ನೀಡುವುದಕ್ಕೆ ನಿರ್ಬಂಧ ವಿಧಿಸಿದ್ದಾರಲ್ಲದೆ, ಆ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಗೆ ಮೈಸೂರು ನಗರದ  ಹೋಟೆಲ್,  ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಗಳಲ್ಲಿ ಮಧ್ಯರಾತ್ರಿ 12.30ರ ತನಕ ಮಾತ್ರ ಅನುಮತಿ ನೀಡಲಾಗಿದ್ದು  ಅದರೊಳಗೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಅಂತ್ಯಗೊಳಿಸಬೇಕು. ಈ ಅನುಮತಿಯನ್ನು ಸಿಎಲ್-2 ವರ್ಗದ ಮದ್ಯದ ಅಂಗಡಿಗಳಿಗೆ ನೀಡಲಾಗಿರುವುದಿಲ್ಲ. ಮದ್ಯ ಸರಬಾರಾಜನ್ನು ಮಧ್ಯರಾತ್ರಿ 12.30ರೊಳಗೆ ಕಡ್ಡಾಯವಾಗಿ ಮುಕ್ತಾಯ ಮಾಡಬೇಕು. ಆ ನಂತರ ಮದ್ಯ ಸರಬರಾಜು ಮಾಡಬೇಕಾದಲ್ಲಿ ಅಬಕಾರಿ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ, ಅನುಮತಿ ಪತ್ರದ ಪ್ರತಿಯನ್ನು ಸ್ಧಳೀಯ ಪೊಲೀಸ್ ಠಾಣೆಗೆ ಮಾಹಿತಿಗಾಗಿ ನೀಡುವಂತೆ ಸೂಚಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷತೆಯಿಂದ ವಾಹನ ಚಾಲನೆ ಮಾಡುವುದು,  ವೀಲಿಂಗ್ ಮತ್ತು ರೇಸಿಂಗ್ ಮಾಡುವುದು ಹಾಗೂ ಕಾರುಗಳಲ್ಲಿ ಅತಿಯಾಗಿ  ಮ್ಯೂಸಿಕ್ ಹಾಕಿಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುತ್ತದೆ.
ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು, ಮಹಿಳೆಯರನ್ನು  ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರಿ ತೊಂದರೆ ಮಾಡಬಾರದು. ಹಾಗೊಂದು ವೇಳೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ದ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಪೊಲೀಸ್ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಂಡು ಕಡಿಮೆ ಧ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಲು ಮನವಿ ಮಾಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ರಾತ್ರಿ  10 ಗಂಟೆಯ ನಂತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. (ಇದು ಚಾಮುಂಡಿ ಬೆಟ್ಟದಲ್ಲಿ ವಾಸಿಸುವವರಿಗೆ  ಅನ್ವಯಿಸುವುದಿಲ್ಲ.) ಹೀಗಾಗಿ ವರ್ಷಾಚರಣೆಗಾಗಿ ಇಲ್ಲಿಗೆ ತೆರಳಲು ಅವಕಾಶವಿಲ್ಲ. ಹೊಸವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಪಾರ್ಕ್ ಗಳಲ್ಲಿ, ರಸ್ತೆಗಳಲ್ಲಿ, ಮೈದಾನಗಳಲ್ಲಿ ಮತ್ತು ವಾಹನಗಳ ಒಳಗಡೆ ಕುಳಿತು ಮದ್ಯಪಾನ  ಮಾಡುವುದಕ್ಕೂ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ  ಅಶ್ಲೀಲ, ನಂಗಾನಾಚ್ ನೃತ್ಯಗಳನ್ನು ಆಯೋಜಿಸುವುದು ಮತ್ತು  ಮಾಡುವುದು, ಜತೆಗೆ ಜೂಜಾಟವನ್ನು ನಿರ್ಬಂಧಿಸಲಾಗಿದೆ.

ಇನ್ನು ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸುವ ಹೋಟೆಲ್, ರೆಸ್ಟೋರೆಂಟ್ ಹಾಗೂ   ಕ್ಲಬ್ ಗಳಲ್ಲಿ ಮಂಜಾಗ್ರತಾ  ಕ್ರಮವಾಗಿ ಸೂಕ್ತ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು.  ಹೊಸ ವರ್ಷಾಚರಣೆ ಮುಗಿದ ನಂತರ ತಮ್ಮ ಮನೆಗಳಿಗೆ ತೆರಳುವ ಸಾರ್ವಜನಿಕರೊಂದಿಗೆ ಟ್ಯಾಕ್ಸಿ, ಆಟೋ ರಿಕ್ಷಾಗಳ ಚಾಲಕರು ಸೌಜನ್ಯದಿಂದ ವರ್ತಿಸಿ ಹೆಚ್ಚು ಚಾಡಿಗೆಗೆ ಒತ್ತಾಯ ಮಾಡದೇ ಸುರಕ್ಷಿತವಾಗಿ ತಲುಪಿಸಬೇಕು.

See also  ಚಾಮುಂಡೇಶ್ವರಿ ವರ್ಧಂತಿಗೆ ಹರಿದು ಬಂದ ಭಕ್ತಸಾಗರ

ಡಿ.31ರಂದು ರಾತ್ರಿ ಮೈಸೂರು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿರುತ್ತದೆ. ನಗರದ ಎಲ್ಲಾ ಸಂಚಾರ ಮತ್ತು ಕಾನೂನು ವಿಭಾಗದ  ಪೊಲೀಸ್ ಅಧಿಕಾರಿ  ಮತ್ತು ಸಿಬ್ಬಂದಿ, ಪೊಲೀಸ್ ಗಸ್ತು ವಾಹನಗಳು ಎಲ್ಲಾ ಕಡೆ ಕಾರ್ಯ  ಪ್ರವೃತ್ತರಾಗಿರುವುದರಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 0821-2418339,  0821-2418139, 100ಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆಯನ್ನು  ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ. ಸಾರ್ವಜನಿಕರು ಶಾಂತಿಗೆ ಭಂಗ ತರದಂತೆ ವರ್ಷಾಚರಣೆ ಮಾಡುವಂತೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು