ಮೈಸೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ(ಕರ್ನಾಟಕ ಸರ್ಕಾರ)ದ ವತಿಯಿಂದ ನೀಡಲಾಗುವ ಮೈಸೂರು ವಿಭಾಗದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿಗೆ ಹುಣಸೂರು ತಾಲೂಕಿನ ಹರವೆ ಗ್ರಾಮದ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎಂ.ಕೆ. ಸುಷ್ಮಾ ಮತ್ತು ಹೆಚ್.ಎಂ.ಜೀವನ್ ಬಾಜನರಾಗಿದ್ದಾರೆ.
ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ಪಡೆದುಕೊಂಡರು. ಈ ವಿದ್ಯಾರ್ಥಿಗಳು 2016-17ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ್ದರಲ್ಲದೆ, ಹುಣಸೂರು ತಾಲೂಕಿನ ಗ್ರಾಮೀಣ ಪ್ರದೇಶದ ವಿಭಾಗದಲ್ಲಿ ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿ ಕನ್ನಡ ಭಾಷಾ ಮಾಧ್ಯಮದ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇವರ ಸಾಧನೆಯನ್ನು ಶಾಲೆಯ ಮುಖ್ಯಶಿಕ್ಷಕರಾದ ಬಿ.ಆರ್. ಶೇಖರ್ ಆಡಳಿತಾಧಿಕಾರಿ ರವಿಕುಮಾರ್ ಹಾಗೂ ಸಹಶಿಕ್ಷಕರು ಪ್ರಶಂಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಮಹದೇವ್ ತಿಳಿಸಿದ್ದಾರೆ