ಮೈಸೂರು: ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಕರ್ನಾಟಕ ಸಂಸ್ಥೆಯ ಆತಿಥ್ಯದಲ್ಲಿ ನಗರದ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ವಿ.ಪಿ. ದೀನದಯಾಳು ನಾಯ್ಡು ನಗರದಲ್ಲಿ 2016 ಡಿಸೆಂಬರ್ 29 ರಿಂದ 2017 ಜನವರಿ 4ರ ತನಕ ಒಂದು ವಾರಗಳ ಕಾಲ ಆಯೋಜಿಸಿದ್ದ 17ನೇ ರಾಷ್ಟ್ರೀಯ ಜಾಂಬೂರಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾದ ಪ್ಯಾರಡೈಸ್ ಮುಕ್ತ ದಳದ ಸ್ಕೌಟ್ ವಿಭಾಗದಲ್ಲಿ ಬಿ.ಆರ್. ಧನುಷ್ ಗೆ 17ನೇ ರಾಷ್ಟ್ರೀಯ ಜಾಂಬೂರಿ ಅವಾರ್ಡ್ ಲಭಿಸಿದೆ.
ನಗರದ ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಿ.ಆರ್. ಧನುಷ್, ಸಾಹಿತಿ ಬನ್ನೂರು ಕೆ. ರಾಜು ಹಾಗೂ ಶಿಕ್ಷಕಿ ಪಿ. ಮಹಾಲಕ್ಷ್ಮಿ ದಂಪತಿಯ ಪುತ್ರನಾಗಿದ್ದು ಪ್ರತಿಭಾವಂತ ವಿದ್ಯಾರ್ಥಿಯಾಗಿರುವುದರ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಮುಂದಿದ್ದು ಈ ದಿಸೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಈಗಾಗಲೇ ಅನೇಕ ಪ್ರಶಸ್ತಿ, ಪುರಸ್ಕಾರ, ಬಹುಮಾನಗಳಿಗೆ ಭಾಜನನಾಗಿದ್ದಾನೆ.