ಮೈಸೂರು: ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ. ಅಂದು ಮೋಕ್ಷಪ್ರಾಪ್ತಿಯಾದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ ಎನ್ನುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪ್ರಯುಕ್ತ ಮೈಸೂರಿನಲ್ಲಿ ಯೋಗನರಸಿಂಹದೇವಸ್ಥಾನ, ವೆಂಕಟರಮಣ, ವೆಂಕಟಾಚಲಪತಿ ದೇವಸ್ಥಾನ ಹಾಗೂ ಸಚ್ಚಿದಾನಂದ ಗಣಪತಿ ಆಶ್ರಮಗಳಲ್ಲಿ ವೈಕುಂಠ ಏಕಾದಶಿಯಂದು ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳು ತೆರಳಿ ವಿಶೇಷ ಪೂಜೆ ಸಲ್ಲಿಸಿದರು, ಭಾಷ್ಯಂ ಸ್ವಾಮಿಜಿ ಹಾಗೂ ಶ್ರೀನಿವಾಸ್ ರವರಿಂದ ಪ್ರಸಾದ ವಿನಿಯೋಗ ನಡೆಯುತಿತ್ತು.
ಮೈಸೂರಿನ ಪ್ರಮುಖ ದೇವಸ್ಥಾನಗಳಿಗೆ ಭಕ್ತಾದಿಗಳು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಶ್ರೀಮನ್ನಾರಾಯಣನೇ ಧರೆಗಿಳಿದು ಬಂದಂತಹ ಅನುಭವವನ್ನು ಭಕ್ತರು ಪಡೆದರು. ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ದೇವರನ್ನು ಭಕ್ತಾದಿಗಳು ಕಣ್ತುಂಬಿಕೊಂಡರು. ದೇವಾಲಯಗಳಲ್ಲಿ ಶ್ರೀಮನ್ನಾರಾಯಣನ ಭಕ್ತಿಪ್ರಧಾನ ಗೀತೆಗಳು, ಮಂತ್ರಘೋಷಗಳು ಕೇಳಿಬರುತ್ತಿವೆ.
ದೇವಸ್ಥಾನವು ಪರಕಾಲ ಮಠದ ಪಂಚಾಂಗವನ್ನು ಅನುಸರಿಸಲಿದ್ದು, ಅದರ ಪ್ರಕಾರ ಜನವರಿ 9ರಂದು ವೈಕುಂಠ ಏಕಾದಶಿ ನಡೆಯಲಿದೆ. ನಾಳೆ ಅಂದರೆ ಜ.9ರಂದು ದೇವರಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಭಕ್ತರಿಗೆ ಈ ದಿನವೂ ದೇವರ ದರ್ಶನ ಮಾಡಲು ಅವಕಾಶ ನೀಡಲಾಗುವುದು. ನಿರಾಸೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.