ಮೈಸೂರು: ತಮ್ಮ ಪಕ್ಷದ ಕೇಂದ್ರ ಸಚಿವರು ತಮ್ಮ ಕ್ಷೇತ್ರಕ್ಕೆ ಬಂದರೂ ಸ್ಥಳೀಯ ಸಂಸದರಿಗೆ ಸೌಜನ್ಯಕ್ಕಾದರೂ ಮಾಹಿತಿ ನೀಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ದೂರ ಉಳಿದ ಘಟನೆ ನಡೆದಿದೆ.
ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ವಿಜಯ ಗೋಯಲ್ ನಿನ್ನೆ ಕೊಡಗಿನ ಗೋಣಿಕೊಪ್ಪದಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಅಥ್ಲೆಟಿಕ್ಸ್ ಸೆಂಟರ್ ನ ಉದ್ಘಾಟನೆ ಮಾಡಲು ಆಗಮಿಸಿದರು. ಈ ಬಗ್ಗೆ ಕೇಂದ್ರ ಸಚಿವರ ಕಾರ್ಯಲಾಯವೂ ಸ್ಥಳೀಯ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಇದರಿಂದ ಅಸಮಾಧಾನಗೊಂಡ ಸಂಸದ ಕಾರ್ಯಕ್ರಮದಿಂದ ಗೈರಾಗಿ, ತಮ್ಮ ಟ್ವಿಟರ್ ನಲ್ಲಿ ಕೂರ್ಗ್ ಗೆ ನಾಳೆ ಕಾರ್ಯಕ್ರಮಕ್ಕೆ ಬರುತ್ತಿರಾ, ಸೌಜನ್ಯಕ್ಕದರೂ ಸ್ಥಳೀಯ ಸಂಸದರಿಗೆ ತಮ್ಮ ಕಾರ್ಯಾಲಯ ಮಾಹಿತಿ ನೀಡಿಲ್ಲ ಎಂದು ಟ್ವಿಟರ್ ನಲ್ಲಿ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.