ಮೈಸೂರು: ನಾನು ಸ್ವಾಮಿ ವಿವೇಕಾನಂದರ ಪರಮ ಭಕ್ತ, ಸ್ವ ಇಚ್ಚೆಯಿಂದ ದೇಹ ತ್ಯಾಗ ಮಾಡುತ್ತಿದ್ದೇನೆ ನನ್ನ ದೇಹವನ್ನ ಮರಣೋತ್ತರ ಪರೀಕ್ಷೆ ನಡೆಸದೆ, ದೇಹಕ್ಕೆ ಆರ್ ಎಸ್ ಎಸ್ ಧ್ವಜವನ್ನ ಸುತ್ತಿ, ಆರ್ ಎಸ್ ಎಸ್ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ನೇರವೇರಿಸಬೇಕೆಂದು 8 ಪುಟದ ಡೆತ್ ನೋಟ್ ಬರೆದಿಟ್ಟು ಯುವಕ ನೇಣಿಗೆ ಶರಣಾಗಿರುವ ಘಟನೆ ಜೆ.ಪಿ ನಗರದಲ್ಲಿ ನಡೆದಿದೆ.
ನೇಣಿಗೆ ಶರಣಾದವನು ಆರ್ ಎಸ್ ಎಸ್ ಕಾರ್ಯಕರ್ತ ಬಾಬು(23). ಈತ ಮೂಲತ: ತುಮಕೂರು ಜಿಲ್ಲಯವನು. ಚಿಕ್ಕಂದಿನಿಂದಲ್ಲೆ ಅಣ್ಣನ ಜೊತೆ ಮೈಸೂರಿನ ಮಾವನ ಮನೆಗೆ ಬಂದು ಸೇರಿಕೊಂಡ ಬಾಬು, ಆರ್ ಎಸ್ ಎಸ್ ನ ಸಕ್ರೀಯ ಕಾರ್ಯಕರ್ತನಾಗಿದ್ದು, ಈತ ಸಿವಿಲ್ ಡಿಪ್ಲೋಮಾ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ. ನಗರದಲ್ಲಿ ನಡೆಯುವ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕ್ರಮದಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿದ್ದು, ಇತ್ತೀಚಿಗೆ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದ ಹಿನ್ನಲ್ಲೆಯಲ್ಲಿ ಮಾನಸಿಕವಾಗಿ ಖಿನ್ನತೆ ಒಳಗಾಗಿದ್ದ.
8 ಪುಟದ ಡೆತ್ ನೋಟ್:
ನಿನ್ನೆ ಸಂಜೆ ಸಾಯಲು ನಿರ್ಧರಿಸಿದ ಬಾಬು, 8 ಪುಟಗಳ ಡೆತ್ ನೋಟ್ ಬರೆದಿಟ್ಟು ನನ್ನ ಸಾವಿಗೆ, ನಾನೇ ಕಾರಣ, ನಾನು ಸ್ವಾಮೀ ವಿವೇಕಾನಂದರ ಪರಮ ಭಕ್ತ, ಸ್ವ ಇಚ್ಚೆಯಿಂದ ದೇಹ ತ್ಯಾಗ ಮಾಡುತ್ತಿದ್ದೇನೆ. ಸತ್ತ ನಂತರ ನನ್ನ ದೇಹವನ್ನ ಮರಣೋತ್ತರ ಪರೀಕ್ಷೆ ನಡೆಸದೆ, ದೇಹಕ್ಕೆ ಆರ್ ಎಸ್ ಎಸ್ ನ ಕೇಸರಿ ಬಣ್ಣದ ಬಾವುಟವನ್ನ ತೊಡಿಸಿ, ಆರ್ ಎಸ್ ಎಸ್ ವಿಧಿ ವಿಧಾನದಂತೆ ಅಂತ್ಯೆ ಕ್ರಿಯೆ ನಡೆಸಿ. ಅದಕ್ಕೂ ಮೊದಲು ಚಾಮುಂಡಿ ಬೆಟ್ಟ ಹಾಗೂ ನಂಜನಗೂಡಿನ ನಂಜುಡೇಶ್ವರ ದೇವಸ್ಥಾನದ ತೀರ್ಥವನ್ನ ದೇಹದ ಮೇಲೆ ಹಾಕಿದ ನಂತರ, ದೇಹದ ಅಸ್ತಿಯನ್ನ ಕನ್ಯಾಕುಮಾರಿ ಸಮುದ್ರದಲ್ಲಿರುವ ವಿವೇಕಾನಂದರ ಪ್ರತಿಮೆ ಬಳಿ ವಿಸರ್ಜಿಸಿ ಎಂದು 8 ಪುಟದ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ನಗರದ ದಕ್ಷಿಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.