ಮೈಸೂರು: ಕೆ.ಆರ್. ಪೇಟೆ ಪಟ್ಟಣದ ತೇಜಸ್ವಿನಿ (32) ನೇಣಿಗೆ ಶರಣಾಗಿರುವ ಗೃಹಿಣಿ. ಎರಡೂವರೆ ವರ್ಷಗಳ ಹಿಂದೆ ನಿಂಗರಾಜು (48) ಎಂಬ ಟಿ.ನರಸೀಪುರ ಪಟ್ಟಣದ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯನ್ನ ಇವರು ಮದುವೆಯಾಗಿದ್ದರು. ಈತನ ಕುಟುಂಬದಲ್ಲಿ ಮದುವೆಯಾಗಬೇಕಿದ್ದ ತಂಗಿ, ತಮ್ಮ ಇದ್ದು, ಇವರ ಮದುವೆಗೆ ಹೆಚ್ಚಿಗೆ ಹಣ ತರುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕೆ.ಆರ್.ಪೇಟೆಯ ತವರು ಮನೆಯಿಂದ ಖಾಸಗಿ ಬಸ್ ಗಳಲ್ಲಿ ನೂರಾರು ಜನ ಆಗಮಿಸಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪತಿ, ಆತನ ತಮ್ಮ, ತಂಗಿ ಹಾಗೂ ತಾಯಿ ಮಗುವನ್ನ ಎತ್ತಿಕೊಂಡು ಪರಾರಿಯಾಗಿದ್ದಾರೆ. ಮಗು ಬರುವವರೆಗೂ ಶವವನ್ನು ತೆಗೆಯುದಿಲ್ಲ ಎಂದು ತವರು ಮನೆಯವರು ಹಠ ಹಿಡಿದಿದ್ದು ಪರಿಸ್ಥಿತಿ ಬಿಗುವಿನಿಂದ ಕೂಡಿದೆ.