News Kannada
Sunday, January 29 2023

ಮೈಸೂರು

ಇಂದು ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ: ಮದುವಣಗಿತ್ತಿಯಂತೆ ಸಿಂಗಾರಗೊಂಡ ರಂಗಾಯಣ

Photo Credit :

ಇಂದು ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ: ಮದುವಣಗಿತ್ತಿಯಂತೆ ಸಿಂಗಾರಗೊಂಡ ರಂಗಾಯಣ

ಮೈಸೂರು: ವಿಶ್ವವಿಖ್ಯಾತ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಇಂದು ರಂಗಾಯಣ ಆವರಣದಲ್ಲಿ ಚಾಲನೆ ದೊರೆಯಲಿದ್ದು ರಂಗಾಯಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಜ.13ರಿಂದ 18ರವರೆಗೆ 6 ದಿನಗಳ ಕಾಲ ನಡೆಯಲಿರುವ ನಾಟಕೋತ್ಸವಕ್ಕೆ ರಂಗಾಯಣ ಹಾಗೂ ಕಲಾಮಂದಿರದ ಸುತ್ತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಹುರೂಪಿ ಹತ್ತಿರವಾಗುತ್ತಿದ್ದಂತೆ ರಂಗಾಯಣದ ಆವರಣ ಸ್ವರೂಪವೇ ಬದಲಾಗಿ ವಿವಿಧ ಆಕರ್ಷಣೀಯ ಬಣ್ಣಗಳಿಂದ ಸಿಂಗಾರಗೊಂಡಿದೆ. ರಂಗಸಂಗೀತ, ದೇಶ, ವಿದೇಶದ ನಾಟಕಗಳು, ಚಲನಚಿತ್ರೋತ್ಸವ, ಬಿತ್ತಿ ಚಿತ್ರ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ಬಹುರೂಪಿಗೆ ಮೆರಗು ನೀಡಲಿವೆ.

ನಾಟಕ ನಡೆಯುವ ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ದೇಶವಿದೇಶಗಳಿಂದ ಬರುವ ಕಲಾವಿದರು ವಾಸ್ತವ್ಯ ಹೂಡಲು ಮುಕ್ತ ವಿವಿ, ಮೈಸೂರು ವಿವಿ ಅತಿಥಿ ಗೃಹ ಸೇರಿದಂತೆ ಹಲವು ಕಡೆ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ದಿನಕ್ಕೆ 150 ರಿಂದ 200 ಮಂದಿ ಕಲಾವಿದರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

60 ಮಳಿಗೆಗಳ ಸ್ಥಾಪನೆ: ಬಹುರೂಪಿ ನಾಟಕೋತ್ಸವದಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಸಾಹಿತ್ಯ ಹಾಗೂ ಭೋಜನ ಪ್ರಿಯರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 60 ಮಳಿಗೆಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ನಾಟಕ, ಜಾನಪದ ಹಾಡು ಕುಣಿತಗಳನ್ನು ನೋಡಿ ಆನಂದಿಸಿದವರಿಗೆ ಕಲಾಮಂದಿರದ ಬಿದಿರು ಮೆಳೆಯ ಸಮೀಪದಲ್ಲಿ ಬೇಕೆನಿಸುವಷ್ಟು ತಿನ್ನಲು ವಿಶೇಷ ಖಾದ್ಯಗಳನ್ನು ತಯಾರಿಸಲಾಗುವ ಕ್ಯಾಂಟಿನನ್ನು ತೆರೆಯಲಾಗಿದೆ. ಪುಸ್ತಕ, ಕಲಾಕೃತಿಗಳು, ಬಟ್ಟೆ ಅಂಗಡಿಗಳು, ಅಲಂಕಾರಿಕ ವಸ್ತುಗಳು ಹಾಗೂ ಸಾವಯವ ಪದಾರ್ಥಗಳ ಮಾರಾಟವನ್ನು ಮಾತ್ರ ರಂಗಾಯಣದ ಮುಂಭಾಗದಲ್ಲಿ ಆಯೋಜಿಸಲಾಗಿದೆ.

ನಾಟಕೋತ್ಸವದಲ್ಲಿ ಬಹುಭಾಷಾ ವಿಶೇಷ: ಬಹುರೂಪಿ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ತಕ್ಕಂತೆ ಈ ಬಾರಿ ರಾಜ್ಯ ಅಂತಾರಾಜ್ಯ ಹಾಗೂ ವಿದೇಶಿ ನಾಟಕಗಳ ಸದ್ದು ಮೇಳೈಸಲಿದೆ. ಲಂಡನ್, ಬಾಂಗ್ಲಾ, ಶ್ರೀಲಂಕಾ ಹಾಗೂ ಪೋಲೆಂಡ್ ಕಲಾವಿದರು ಸದ್ಯ ರಂಗಾಸಕ್ತರ ಗಮನ ಸೆಳೆಯಲು ಲಗ್ಗೆ ಇಡುತ್ತಿದ್ದಾರೆ. ದೇಶದ ಕೆಲವು ರಾಜ್ಯಗಳ ಹೆಸರಾಂತ ತಂಡಗಳು ಹಾಗೂ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಮುಂಬೈ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ರಿಸ್ಸಾ, ಸಿಕ್ಕಿಂ, ತಿರುವನಂತಪುರಂ, ಪಾಟ್ನಾ, ಕೇರಳ ಅಲ್ಲದೆ ಬೆಂಗಳೂರಿನ ತಂಡಗಳು, ರಂಗಾಯಣದ ಕಲಾವಿದರ ನಾಟಕಗಳು ಈ ಬಾರಿ ವಿಶೇಷವನ್ನು ಉಣಬಡಿಲಿದೆ.

ಟಿಕೆಟ್ ಗಳಿಗೆ ಡಿಮ್ಯಾಂಡ್: ಬಹುರೂಪಿ ನಾಟಕೋತ್ಸವದ ವಿವಿಧ ಪ್ರದರ್ಶನಗಳಿಗಾಗಿ ಟಿಕೆಟ್ ಖರೀದಿಗಾಗಿ ರಂಗಾಸಕ್ತರು ಮುಗಿಬಿದ್ದಿದ್ದಾರೆ. ಅಲ್ಲದೆ ಅಂತರ್ಜಾಲದಲ್ಲಿಯೂ ರಂಗಪ್ರೇಮಿಗಳು ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಉದ್ಘಾಟನೆಯ ದಿನ ಪ್ರದರ್ಶನಗೊಳ್ಳಲಿರುವ ಮೈಸೂರು ರಂಗಾಯಣದ ಚಿತ್ರಲೇಖೆ ನಾಟಕದ ಟಿಕೆಟ್ ಗಳು ಮೊದಲನೆಯ ದಿನವೇ ಸೋಲ್ಡ್ ಓಟ್ ಆಗಿವೆ.

ಜ.10ರಿಂದಲೇ ಟಿಕೆಟ್ ಮಾರಾಟ ಆರಂಭವಾಗಿದೆ. ಆನ್ ಲೈನ್ ಮೂಲಕವೂ ಖರೀದಿಸಬಹುದಾಗಿದ್ದು, ಈಗಾಗಲೇ 6 ದಿನ ನಡೆಯುವ ನಾಟಕಗಳ ಶೇ.50ರಷ್ಟು ಮಾರಾಟವಾಗಿರುವುದು ಈ ಬಾರಿಯ ವಿಶೇಷ.

See also  ಬಿಜೆಪಿ ಜತೆ ಯಾವುದೇ ಹೊಂದಾಣಿಕೆ ಇಲ್ಲ: ದೇವೇಗೌಡ ಸ್ಪಷ್ಟನೆ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು